ಸೋಮವಾರ, ಜೂನ್ 21, 2021
24 °C

ಜಸ್ಟ್ ಮ್ಯೂಸಿಕ್- 24 | ಮಹದೇಶ್ವರ...ಬಿತ್ತು ಏಟು!

ಮಳವಳ್ಳಿ ಎಂ.ಮಹದೇವಸ್ವಾಮಿ ಎಂದರೆ ಸಾಕು, ನೂರಾರು ಜನಪದ ಕತೆಗಳ, ಗೀತೆಗಳ ಕ್ಯಾಸೆಟ್‌ಗಳು ಕಣ್ಣಮುಂದೆ ಬರುತ್ತವೆ. ಜನಪದ ಗೀತೆಗಳನ್ನೇ ಉಸಿರಾಡುವ ಅವರು ಒಂದು ಕಾಲದಲ್ಲಿ ಕ್ಯಾಸೆಟ್‌ ಲೋಕದ ಕ್ರಾಂತಿಕಾರಿಯಾಗಿದ್ದರು. 90ರ ದಶಕದ ಸೂಪರ್‌ ಸ್ಟಾರ್‌ಗಳ ಸಿನಿಮಾ ಕ್ಯಾಸೆಟ್‌ಗಳಿಗಿಂತಲೂ ಹೆಚ್ಚಾಗಿ ಮಹದೇವಸ್ವಾಮಿಯವರ ಕ್ಯಾಸೆಟ್‌ಗಳು ಮಾರಾಟವಾಗುತ್ತಿದ್ದವು. ಮಲೈಮಹದೇಶ್ವರ ಸ್ವಾಮಿ, ಮಂಟೆಸ್ವಾಮಿ, ಸಿದ್ಧಪ್ಪಾಜಿ, ನಂಜುಂಡೇಶ್ವರ, ಸಂಕಮ್ಮ, ಬಿಳಿಗಿರಿ ರಂಗನಾಥ ಮುಂತಾದ ಜನಪದ ಕತೆಗಳನ್ನು ಅವರು ಇಂದಿಗೂ ಕಾಪಾಡಿಕೊಂಡು ಬಂದಿದ್ದು ಜನಪದ ಪರಂಪರೆಯ ರಾಯಭಾರಿಯಂತಿದ್ದಾರೆ. ಆದರೆ, ಅವರು ನಡೆದು ಬಂದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಅವರು ಚಿಕ್ಕವರಾಗಿದ್ದಾಗ ಮಳವಳ್ಳಿ ಬಸ್‌ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಅನ್ನಕ್ಕಾಗಿ ಊರೂರು ಸುತ್ತಿ ಭಿಕ್ಷೆ ಬೇಡುತ್ತಿದ್ದರು. ಬಡತನದ ಬದುಕಿನ ಜೊತೆಯಲ್ಲೇ ಜನಪದ ಕತೆ, ಗೀತೆಗಳನ್ನು ತಮ್ಮ ಉಸಿರಾಗಿಸಿಕೊಂಡರು. ಅವರು ಚಿಕ್ಕವರಾಗಿದ್ಧಾಗ ನಡೆದ ಒಂದು ನೋವು ಹಾಗೂ ತಮಾಷೆಯ ಹಿತಾನುಭವ ಈ ವಾರದ ಜಸ್ಟ್‌ ಮ್ಯೂಸಿಕ್‌ ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp