ವಚನಗಳನ್ನೇ ಉಸಿರಾಡುವ ಪಂಡಿತ್ ಅಂಬಯ್ಯ ನುಲಿ ಅವರು ತಳಸಮುದಾಯದ ವಚನಕಾರರ ವಚನಗಳಿಗೆ ಜೀವ ತುಂಬಿದ್ದಾರೆ. ಕಲ್ಯಾಣದ ರಾಜಬೀದಿಯಲ್ಲಿ ಕಸ ಗುಡಿಸುತ್ತಿದ್ದ ಸತ್ಯಕ್ಕನ ವಚನಗಳನ್ನು ಮನದುಂಬಿ ಹಾಡಿದ್ದಾರೆ. ಗಜೇಶ ಮಸಣಯ್ಯ, ಆಯ್ದಕ್ಕಿ ಲಕ್ಕಮ್ಮ, ದೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಉರಿಲಿಂಗ ಪೆದ್ದಿ ಮುಂತಾದವರ ವಚನ ಸಾಹಿತ್ಯಕ್ಕೆ ಧ್ವನಿಯಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿರುವ ಅಂಬಯ್ಯ ನುಲಿ ಅವರು ವಚನ ಹಾಗೂ ದೇವರನಾಮಗಳ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ನಮ್ಮ ನಾಡಿನಲ್ಲಿ ಅತೀ ಹೆಚ್ಚು ವಚನಗಳನ್ನಾಡುವ ಕಲಾವಿದ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಬರೋಬ್ಬರಿ 180 ಧ್ವನಿಸುರಳಿಗಳನ್ನು ಹೊರತಂದಿದ್ದಾರೆ. 40 ವರ್ಷಗಳಿಂದ ಸಂಗೀತೆ ಸೇವೆ ನೀಡುತ್ತಿರುವ ಅವರು ರಾಜ್ಯ, ಹೊರರಾಜ್ಯ, ಹೊರದೇಶಗಳಲ್ಲಿ ಕಾರ್ಯಕ್ರಮ ಕೊಟ್ಟಿದ್ಧಾರೆ. ಶಿಕ್ಷಕರಾಗಿ ನಿವೃತ್ತರಾಗಿರುವ ಅವರು ರಾಯಚೂರು ಜಿಲ್ಲೆ ಹೊಸೂರು ಗ್ರಾಮದವರು. ಸದ್ಯ ಅವರು ರಾಯಚೂರಿನ ಮಾನ್ವಿಯಲ್ಲಿ ನಿವೃತ್ತಿ ಜೀವನ ಹಾಗೂ ಸಂಗೀತ ಸೇವೆಯಲ್ಲಿ ತೊಡಗಿದ್ದಾರೆ. ಅಂಬಯ್ಯ ನುಲಿ ಅವರ ಗುರುವಿನ ಕರುಣೆ ಕುರಿತಾದ ಒಂದು ಹಿತಾನುಭಾವ ಈ ವಾರದ ಜಸ್ಟ್ ಮ್ಯೂಸಿಕ್ ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.