ಗುರುವಾರ , ಮೇ 6, 2021
23 °C

ಜಸ್ಟ್‌ ಮ್ಯೂಸಿಕ್‌–13 | ಗಾಯಕ ರವಿ ಮೂರೂರು ಸಂಗೀತ ಪಯಣ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಲವಾದ ಅಡಿಪಾಯದ ಮೇಲೆ ಗಾಯಕ ರವಿ ಮೂರೂರು ಅವರು ರಂಗ ಸಂಗೀತ, ಸುಗಮ ಸಂಗೀತ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ರವಿ ಅವರು ಆರಂಭದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ, ಎಂ.ಪಿ.ಹೆಗಡೆ ಪಡಿಗೆರೆ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದರು. ನಂತರ ರಾಜು ಅನಂತಸ್ವಾಮಿ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡಿದರು. ಆಮೇಲೆ ಗಾನಗಾರುಡಿಗ ಸಿ.ಅಶ್ವತ್ಥ್‌ ಅವರ ಶಿಷ್ಯನಾಗಿ ಹಾಡುತ್ತಾ ಸಾಗಿದರು.

ಅಶ್ವತ್ಥ್ ಅವರ ‘ಕನ್ನಡವೇ ಸತ್ಯ’ ಸುಗಮ ಸಂಗೀತ ಸರಣಿಯಲ್ಲಿ 7 ವರ್ಷ ಪ್ರಮುಖ ಗಾಯಕರಾಗಿ ಹಾಡಿದರು. 2009, ಡಿಸೆಂಬರ್‌ 29ರಂದು ಮುಂಜಾನೆ ರವಿ ಮೂರೂರು ‘ಟಿಫನ್‌ ಬಕ್ಸ್‌’ ಸಂಗೀತ ಕಾರ್ಯಕ್ರಮದಲ್ಲಿ ‘ಹೇಳಿ ಹೋಗು ಕಾರಣ’ ಗೀತೆ ಹಾಡುವಾಗ ಗುರು ಅಶ್ವಥ್‌ ಸಾವಿನ ಸುದ್ದಿ ಬಂತು. ಆ ಕುರಿತ ಹಿತಾನುಭವ ಈ ವಿಡಿಯೊದಲ್ಲಿದೆ.