ಸೋಮವಾರ, ಸೆಪ್ಟೆಂಬರ್ 26, 2022
24 °C

ದಾವಣಗೆರೆ | ನೀರಾವರಿ ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್‌; ಕೃಷಿಕರ ಕಣ್ಣೀರು

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಮೆಳ್ಳಕಟ್ಟೆ, ಅಣಜಿ, ಲಿಂಗಾಪುರ ಗ್ರಾಮಗಳಲ್ಲಿ ಹೊಲಗದ್ದೆಗಳಲ್ಲಿ ಇರಬೇಕಾದ ರೈತರು ಈಗ ರಸ್ತೆ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂಗುತ್ತಿದ್ದಾರೆ. ತೋಟಗಳಿಗೆ ಹೋಗುವಾಗಲೂ ಧಿಕ್ಕಾರ ಕೂಗುತ್ತಿದ್ದಾರೆ. ಸರ್ಕಾರವು ಕೈಗಾರಿಕಾ ಕಾರಿಡಾರ್‌ ನಿರ್ಮಿಸಲು ರೈತರ ಅನ್ನದ ತಟ್ಟೆಯಂಥ ಫಲವತ್ತಾದ ನೀರಾವರಿ ಭೂಮಿಗೆ ಕೈ ಹಾಕಿರುವುದು ಇದಕ್ಕೆ ಕಾರಣ.