ಶನಿವಾರ, ಸೆಪ್ಟೆಂಬರ್ 18, 2021
30 °C

ವಿಡಿಯೊ: ಮೀನು ಹಿಡಿಯಲು ಹೋಗಿ ಪ್ರವಾಹದಲ್ಲಿ ಸಿಲುಕಿದ್ದ ಯುವಕನ ರಕ್ಷಣೆ

ಹರಿಹರ: ತಾಲ್ಲೂಕಿನ ದೇವರಬೆಳೆಕೆರೆ ಪಿಕಪ್‌ ಡ್ಯಾಂನಲ್ಲಿ ಮೀನು ಹಿಡಿಯಲು ಹೋಗಿ ನೆರೆ ನೀರಿನಲ್ಲಿ ಸಿಲುಕಿದ್ದ ಯುವಕರೊಬ್ಬರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಭಾರಿ ಮಳೆಯಿಂದ ಪಿಕಪ್ ಡ್ಯಾಂ ಒಳಹರಿವು ಹೆಚ್ಚಾಗಿತ್ತು. ಇದರಿಂದಾಗಿ ಎಲ್ಲ ಗೇಟ್‌ಗಳನ್ನು ತೆರೆದಿದ್ದು, ರಭಸವಾಗಿ ಹರಿಯವ ನೀರಿನಲ್ಲಿ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸ್ವಲ್ಪ ಸಮಯ ಈಜಾಡಿ ಡ್ಯಾಂನ ಬದಿಗೆ ಬಂದಿದ್ದು, ಈ ವೇಳೆ ಗ್ರಾಮಸ್ಥರು ಹಗ್ಗ ಎಸೆದಿದ್ದಾರೆ. ಹಗ್ಗ ಹಿಡಿದುಕೊಂಡು ಮೇಲೆ ಬಂದಿದ್ದಾರೆ.

ಪಿಕಪ್ ಡ್ಯಾಂಗೆ ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಪಿಕಪ್ ಡ್ಯಾಂ ಬಳಿ ಯಾರೂ ಬಾರದಂತೆ ತಡೆಯಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.