ಸೋಮವಾರ, ಆಗಸ್ಟ್ 8, 2022
22 °C

ನೋಡಿ: ಮದುವೆ ಮಾಡಲಿಲ್ಲ ಎಂದು ಕುಡಿದ ಅಮಲಿನಲ್ಲಿ ಟವರ್ ಏರಿದ ಯುವಕ

ಮರಿಯಮ್ಮನಹಳ್ಳಿ: ಪ್ರೀತಿಸಿದ ಯುವತಿಯ ಜೊತೆ ಮದುವೆ ಮಾಡಿಕೊಡಲು ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತ ಯುವಕನೊಬ್ಬ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನೆಡದಿದೆ. ಸ್ಥಳೀಯ ಆರನೇ ವಾರ್ಡ್‌ ಯುವಕ ಚಿರಂಜೀವಿ ಗೋಸಂಗಿ (23) ಪಕ್ಕದ ಮನೆಯ ಯುವತಿ ಉಮಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಮನೆಯವರು ಒಪ್ಪಿದ್ದಾರೆ. ಆದರೆ, ಲಾಕ್ ಡೌನ್‌ನಿಂದ ಮದುವೆಗೆ ವಿಳಂಬವಾಗುತ್ತಿದೆ. ಇದರಿಂದ ಬೇಸತ್ತ ಯುವಕ ಕುಡಿದ ಅಮಲಿನಲ್ಲಿ ಹಳೆಯ ವೀರಭದ್ರೇಶ್ವರ ಟಾಕೀಸ್ ಬಳಿಯ ಏರ್‌ಟೆಲ್ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...