ಸೋಮವಾರ, ಅಕ್ಟೋಬರ್ 26, 2020
20 °C

IPL 2020 | KXIP vs SRH: ಜಯದ ಕನವರಿಕೆಯಲ್ಲಿ ಕೆ.ಎಲ್‌. ರಾಹುಲ್

ದುಬೈ: ರನ್‌ಗಳ ಹೊಳೆಯನ್ನೇ ಹರಿಸುವ ಬ್ಯಾಟಿಂಗ್ ಪಡೆ ಇರುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಬೌಲಿಂಗ್‌ನಲ್ಲಿ ಎಡವುತ್ತಿದೆ. ಅಂಕಪಟ್ಟಿಯ ತಳದಿಂದ ಮೇಲೆದ್ದು ಬರಲು ಹರಸಾಹಸ ಪಡುತ್ತಿದೆ.

ಇದೇ ಹಾದಿಯಲ್ಲಿ ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್ ತಂಡವು ಐದು ಪಂದ್ಯಗಳನ್ನಾಡಿ ನಾಲ್ಕರಲ್ಲಿ ಸೋತಿದೆ. ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್‌ ಐದು ಪಂದ್ಯಗಳಲ್ಲಿ ಆಡಿ ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ.