ಗುರುವಾರ , ಆಗಸ್ಟ್ 5, 2021
21 °C

Video: ಕಚ್ಚಿದ ನಾಗರಹಾವು ಹಿಡಿದು ಸಂಚಾರ- ದಾರಿಯುದ್ದಕ್ಕೂ ಬೆರಗು ಮೂಡಿಸಿದ ಯುವಕ...!

ಕಂಪ್ಲಿ: ಯುವಕನೊಬ್ಬ ತನಗೆ ಕಚ್ಚಿದ ನಾಗರಹಾವನ್ನು ಕೈಯಲ್ಲಿ ಹಿಡಿದು 13ಕಿ.ಮೀ ಬೈಕ್‍ನಲ್ಲಿ ಚಿಕಿತ್ಸೆಗೆ ಕ್ರಮಿಸಿ ದಾರಿಯುದ್ದಕ್ಕೂ ಅಚ್ಚರಿ ಮೂಡಿಸಿರುವುದು ಶನಿವಾರ ಸಂಜೆ ನಡೆದಿದೆ.

ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದ ವಾಲ್ಮೀಕಿ ಕಾಡಪ್ಪ(25) ಅವರಿಗೆ ನಾಗರಹಾವು ಕಚ್ಚಿದ ನಂತರ ಮತ್ತೊಬ್ಬರ ನೆರವು ಪಡೆದು ಬೈಕ್ ಮೂಲಕ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾನೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಮ್ಸ್‍ಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಓದಲು: ಕಚ್ಚಿದ ನಾಗರಹಾವನ್ನು ಹಿಡಿದು ಬೈಕ್‍ನಲ್ಲಿ ಸಂಚಾರ; ಬೆರಗು ಮೂಡಿಸಿದ ಯುವಕ...!