ಸೋಮವಾರ, ಜೂನ್ 1, 2020
27 °C

ನನಗೆ ಡೀಸೆಲ್ ಇಲ್ಲ ಅಂದ್ರೆ ಬಂಕ್ ಸುಟ್ಟಾಕ್ತಿನಿ: ನಂಜನಗೂಡು ಎಸ್ಐ ಬೆದರಿಕೆ

 

ನಂಜನಗೂಡಿನ ಸಬ್ ಇನ್‌ಸ್ಪೆಕ್ಟರ್ ಯಾಸ್ಮಿನ್ ತಾಜ್ ಅವರು ಪೆಟ್ರೋಲ್ ಬಂಕ್ ಒಂದರಲ್ಲಿ ಅವಾಚ್ಯ ಶಬ್ದ ಬಳಸಿ, ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ವಿಡಿಯೊವೊಂದು ಮಂಗಳವಾರ ವಾಟ್ಸ್ ಆ್ಯಪ್‌ನಲ್ಲಿ ಸಾಕಷ್ಟು ಹರಿದಾಡುತ್ತಿದೆ.

ಡಿಸೇಲ್ ಇಲ್ಲ ಎಂದ ಪೆಟ್ರೋಲ್ ಬಂಕ್ ಸಿಬ್ಬಂದಿ ವಿರುದ್ದ ಹರಿಹಾಯ್ದಿರುವ ಅವರು ಪೆಟ್ರೋಲ್ ಬಂಕ್ ಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ದೃಶ್ಯಗಳು ವಿಡಿಯೊದಲ್ಲಿವೆ.