ಚರ್ಮದ ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆದಿರುವ ಕೆಲವು ಕ್ರೀಮ್ಗಳನ್ನು ಮಾತ್ರ ಹಚ್ಚುತ್ತೇನೆ. ಅದು ಬಿಟ್ಟರೆ ಶೂಟಿಂಗ್ ಇಲ್ಲದೆ ಮನೆಯಲ್ಲಿ ಇದ್ದಾಗ ಏನನ್ನೂ ಹಾಕದೆ ಹಾಗೇ ಬಿಡುತ್ತೇನೆ. ಇದರಿಂದ ಚರ್ಮದ ಕೋಶಗಳು ಸರಾಗವಾಗಿ ಉಸಿರಾಡಲು ಸಾಧ್ಯವಾಗುತ್ತದೆ.

ಚರ್ಮ ಟ್ಯಾನ್ ಆಗಿದ್ದಾಗ ತನ್ನಿಂತಾನೇ ಸರಿಪಡಿಸಿಕೊಳ್ಳುವ ಸಾಮರ್ಥ್ಯ ದೇಹಕ್ಕೆ ಇರುತ್ತದೆ. ಅದಕ್ಕೆ ಪೂರಕವಾಗಿ ಊಟದಲ್ಲಿ ‘ಸಿ’ ವಿಟಮಿನ್ ಇರುವ ಆಹಾರ ಪದಾರ್ಥಗಳು ಹೆಚ್ಚಾಗಿ ಇರುವಂತೆ ನೋಡಿಕೊಳ್ಳುತ್ತೇನೆ.

ಮೊದಲಿನಿಂದಲೂ ನನಗೆ ಎಣ್ಣೆ ಅಂಶವಿರುವ ಪದಾರ್ಥಗಳೆಂದರೆ ಇಷ್ಟವಾಗದು. ಹಾಗಾಗಿ, ಕುರುಕಲು ತಿಂಡಿಗಳನ್ನು ತಿನ್ನುವುದಿಲ್ಲ.

ಬ್ಲೂಬೆರ್ರಿ, ಸಿಟ್ರಿಕ್ ಅಂಶ ಇರುವ ಹಣ್ಣುಗಳನ್ನು ತಿನ್ನುತ್ತೇನೆ. ಬೆಳಿಗ್ಗೆ ಆಮ್ಲ, ಕರಿಬೇವು ಹಾಗೂ ನಿಂಬೆಹಣ್ಣು ಮಿಶ್ರಣದ ಐಸ್ಕ್ಯೂಬ್ಗಳನ್ನು ಬಿಸಿನೀರಿಗೆ ಹಾಕಿ ಕುಡಿಯುತ್ತೇನೆ. ನನ್ನದು ಕಾಂಬಿನೇಷನ್ ಸ್ಕಿನ್. ಕೆಲವು ಭಾಗ ಒಣಚರ್ಮವಾದರೆ, ಇನ್ನು ಕೆಲವು ಭಾಗ ಜಿಡ್ಡಿನ ಅಂಶದಿಂದ ಕೂಡಿರುತ್ತದೆ.

ಮೊದಲೆಲ್ಲ ಕಡಲೆಹಿಟ್ಟು ಹಚ್ಚುತ್ತಿದ್ದೆ. ಅದು ನನ್ನ ಚರ್ಮಕ್ಕೆ ಚೆನ್ನಾಗಿ ಒಗ್ಗುತ್ತಿತ್ತು. ಈ ಮಧ್ಯೆ ತುಂಬಾ ಮೊಡವೆಗಳಾದವು. ಹಾಗಾಗಿ, ವೈದ್ಯರು ಶಿಫಾರಸು ಮಾಡಿದ ಕ್ರೀಮ್ಗಳನ್ನಷ್ಟೇ ಹಚ್ಚುತ್ತೇನೆ. ಚರ್ಮ ತೇವಯುಕ್ತವಾಗಿರಲು ಚೆನ್ನಾಗಿ ನೀರು ಕುಡಿಯುತ್ತಿರಬೇಕು.

ವಾರಕ್ಕೆ ಮೂರು ಬಾರಿ ರಾತ್ರಿ ಹೊತ್ತು ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡುತ್ತೇನೆ. ಕಡಿಮೆ ರಾಸಾಯನಿಕ ಅಂಶಗಳಿರುವ, ಸಲ್ಫೇಟ್ ಮುಕ್ತವಾಗಿರುವ ಶ್ಯಾಂಪೂ ಬಳಸುತ್ತೇನೆ. ಮನೆಯಲ್ಲಿ ನಾನೇ ಸಿದ್ಧಪಡಿಸಿದ ಎಣ್ಣೆ ‘ವನತೈಲಂ’ ಅನ್ನು ಬಳಸುತ್ತೇನೆ. ಸಮಯವಿದ್ದಾಗ ಮೆಂತ್ಯ, ಮೊಸರು ಅಥವಾ ನೆಲ್ಲಿಕಾಯಿ ಪುಡಿ ಜತೆಗೆ ಮೊಸರು ಸೇರಿಸಿ ಹೇರ್ಪ್ಯಾಕ್ ಮಾಡಿಕೊಳ್ಳುತ್ತೇನೆ. ಇದು ಬಿಟ್ಟರೆ ಅಗಸೆ ಬೀಜದ ಹೇರ್ಪ್ಯಾಕ್ ಮಾಡಿಕೊಳ್ಳು ತ್ತೇನೆ. ಸೌಂದರ್ಯ ಎನ್ನುವುದಕ್ಕೆ ನಿರ್ದಿಷ್ಟವಾದ ವ್ಯಾಖ್ಯಾನವಿಲ್ಲ. ಸಹಜವಾಗಿ ನಾವು ಹೇಗೆ ಇರುವುದಕ್ಕೆ ಬಯಸುತ್ತೇವೆಯೋ ಅದೇ ಸೌಂದರ್ಯ. ಅದು ನಮ್ಮೊಳಗೆ ಇರುವಂಥದ್ದು. ಸಕಾರಾತ್ಮಕ ಆಲೋಚನೆಗಳಲ್ಲಿ ಅಡಗಿರುವಂಥದ್ದು.

–ಗೌತಮಿ ಜಾಧವ್ ಕಿರುತೆರೆ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.