‘ಮುಳ್ಳಿನ ಮೇಲೆ ಸೀರೆ ಬಿದ್ದರೂ, ಸೀರೆ ಮೇಲೆ ಮುಳ್ಳು ಬಿದ್ದರೂ ಹಾನಿಯಾಗುವುದು ಸೀರೆಗೆ’... ಹೆಣ್ಣಿನ ಅಸಹಾಯಕತೆಯನ್ನು, ಗಂಡಿನ ಪೌರುಷವನ್ನು ಹೇಳಲು ನಮ್ಮ ಹಿರಿಯರು ಬಳಸುತ್ತಿದ್ದ ಮಾತಿದು. ಇದನ್ನು ಎಷ್ಟರ ಮಟ್ಟಿಗೆ ನಮ್ಮ ಸಮಾಜ ಅಚ್ಚೊತ್ತಿಗೊಂಡು ಹೋಗುತ್ತಿದೆ ಎಂದರೆ ಈ ಅತ್ಯಾಧುನಿಕ ಕಾಲದಲ್ಲಿಯೂ ಎಲ್ಲ ತಪ್ಪುಗಳಿಗೆ ಹೆಣ್ಣನ್ನು ದೂಷಿಸುವ ಪ್ರವೃತ್ತಿ ಮುಂದುವರಿದೆ. ಇದಕ್ಕೆ ಇತ್ತೀಚೆಗೆ ಕೆಲವು ನಟಿಮಣಿಯರ ಮೇಲೆ ನಡೆಯುತ್ತಿರುವ ‘ಆನ್ಲೈನ್’ ಹಲ್ಲೆಯೇ ಉತ್ತಮ ನಿದರ್ಶನವಾಗಿದೆ.

ಇತ್ತೀಚೆಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ವಿಜೃಂಭಣೆಯಿಂದ ನಡೆಯಿತು. ಆದರೆ, ಮದುವೆಗೆ ಹಾರೈಸುವುದಕ್ಕೂ ಸಂಕೋಚ ಪಡುವ ಕೆಲ ಮನಸ್ಸುಗಳು ಆಕೆಯ ಮುರಿದು ಬಿದ್ದ ನಿಶ್ಚಿತಾರ್ಥವನ್ನು ಎಳೆದುತಂದು, ಅವರ ಬಗ್ಗೆ ಅಶ್ಲೀಲವಾಗಿ ಕಾಮೆಂಟಿಸಿ ತಮ್ಮ ಬಾಯಿ ಚಪಲವನ್ನು ಜಗತ್ತಿಗೆ ತೋರಿಸಿವೆ.

ರಶ್ಮಿಕಾ ವಿಷಯಕ್ಕೆ ಬಂದರೆ, ನಿಶ್ಚಿತಾರ್ಥ ಆಗುವ ವೇಳೆ ಆಕೆ ವಯಸ್ಸು ತೀರಾ ಚಿಕ್ಕದು. ರಕ್ಷಿತ್ ಶೆಟ್ಟಿ ಅವರಾಗಲೇ ಮೂವತ್ತು ದಾಟಿದವರು. ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ ಅವರಲ್ಲಿ ಪ್ರೇಮಾಂಕುರವಾಗಿದುದರಲ್ಲಿ ತಪ್ಪಿಲ್ಲ. ಆ ಪ್ರೀತಿಯನ್ನು ಚಿರಕಾಲ ಉಳಿಸಿಕೊಳ್ಳಬೇಕೆಂದು ಬಯಸಿದುದರಲ್ಲಿಯೂ ತಪ್ಪಿಲ್ಲ... ಕೊನೆಗೆ ಪ್ರೇಮವನ್ನು ಕೊನೆಗೊಳಿಸಿ ತಮ್ಮ ತಮ್ಮ ದಾರಿ ಹಿಡಿದಿದುರಲ್ಲಿಯೂ ಯಾವುದೇ ತಪ್ಪಿಲ್ಲ.. ಅದು ಸಂಪೂರ್ಣವಾಗಿ ಅವರಿಬ್ಬರ ನಿರ್ಧಾರ. ಆದರೆ ಅದೇ ವಿಷಯವನ್ನಿಟ್ಟುಕೊಂಡು ಆಕೆಯ ತೇಜೋವಧೆ ಮಾಡುವುದು ಎಷ್ಟು ಸರಿ?...

ಈ ವಿಷಯದಲ್ಲಿ ರಶ್ಮಿಕಾ ಮತ್ತು ರಕ್ಷಿತ್ ಇಬ್ಬರು ಪ್ರಬುದ್ಧರಾಗಿ ನಡೆದುಕೊಂಡಿದ್ದಾರೆ. ಯಾರೊಬ್ಬರು ಒಬ್ಬರ ಬಗ್ಗೆ ಬಹಿರಂಗವಾಗಿ ದೂಷಿಸಿಲ್ಲ. ಆದರೆ ಸಮಾಜ?... ಇದೇ ವಿಷಯಕ್ಕೆ ರಶ್ಮಿಕಾಳನ್ನು ಟ್ರೋಲ್ ಮಾಡಲಾಯಿತು. ಅದು ಎಲ್ಲಿಯವರೆಗೆ ಹೋಯಿತೆಂದರೆ, ತಾನು ‘ಕನ್ನಡತಿ’ ಎಂದು ಹೇಳಿಕೊಳ್ಳಲು ಆಕೆ ಮುಜುಗರಪಟ್ಟುಕೊಳ್ಳುವವರೆಗೂ.

ಇದೊಂದೆ ಅಲ್ಲ, ಕ್ರಿಕೆಟಿಗ ಯಜುವೇಂದ್ರ ಚಹಾಲ್– ನೃತ್ಯಪಟು ಧನಶ್ರೀ ಅವರ ವಿಚ್ಛೇದನದ ವಿಷಯದಲ್ಲೂ ಟ್ರೋಲ್ಗೆ ಒಳಗಾಗಿದ್ದು ಧನಶ್ರೀ ಅವರೇ. ಆಕೆಯ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಲಾಯಿತು. ಪಬ್ಲಿಸಿಟಿಗಾಗಿ ಚಹಾಲ್ರನ್ನು ಬಳಸಿಕೊಂಡಳು ಎಂಬ ಆರೋಪ ಮಾಡಲಾಯಿತು. ₹4 ಕೋಟಿ ಜೀವನಾಂಶಕ್ಕಾಗಿ ಮಾರಿಕೊಂಡಳು ಎಂದು ಹೀಗೆಳೆಯಲಾಯಿತು. ಆದರೆ, ಈ ಬಗ್ಗೆ ಧನಶ್ರೀ ಮೌನವಾಗಿಯೇ ಇದ್ದರು.

ಇವರಿಬ್ಬರ ವಿಷಯದಲ್ಲಿ ಚಹಾಲ್ ಅವರು ಅತ್ಯಂತ ಅಪ್ರಬುದ್ಧವಾಗಿ ನಡೆದುಕೊಂಡಿರುವುದು ನಿಜಕ್ಕೂ ವಿಷಾದನೀಯ. ನ್ಯಾಯಾಲಯಕ್ಕೆ ಬರುವ ವೇಳೆ ಅವರು ಧರಿಸಿರುವ ‘ಟೀ ಶರ್ಟ್’ನ ಬರಹ ಧನಶ್ರೀ ಅವರ ಚಾರಿತ್ರ್ಯ ಹರಣಕ್ಕೆ ಕಾರಣವಾಯಿತು. ಆ ಬರಹವನ್ನೇ ನಂಬಿದ ಟ್ರೋಲಿಗರು ಧನಶ್ರೀ ಅವರನ್ನು ಮತ್ತಷ್ಟು ಹೀಗಳೆದರು. ಆದರೆ, ಇಂದು ಇದೇ ಸಮಾಜ ಧನಶ್ರೀ ಅವರ ಬಗ್ಗೆ ಕರುಣೆ ತೋರಿಸುತ್ತಿದೆ.

ವಿಚ್ಛೇದನದ ನಂತರ ಚಹಾಲ್ ಅವರು ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದರು. ಆಕೆಯ ಜೊತೆಗೂ ಸಂಬಂಧ ಕಡಿದುಕೊಂಡು, ಆಕೆಯ ಬಗ್ಗೆಯೂ ತಮ್ಮ ಇನ್ಸ್ಟಾ ಸ್ಟೇಟಸ್ನಲ್ಲಿ ಕೆಟ್ಟದಾಗಿ ಬರೆದುಕೊಂಡಿರುವುದು ಚಹಾಲ್ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸಿದೆ. ಆದರೆ ಏನು ಮಾಡುವುದು ಎಲ್ಲಾ ಮುಗಿಯುದವರೊಳಗೆ ಒಂದು ಹೆಣ್ಣಿನ ವ್ಯಕ್ತಿತ್ವವನ್ನೇ ನಡು ಸಂತೆಯಲ್ಲಿ ಬಿಕರಿ ಮಾಡಲಾಯಿತು.

ಹಾರ್ದಿಕ್ ಪಾಂಡ್ಯ– ನತಾಶ ವಿಷಯದಲ್ಲೂ ಇದು ಮುಂದುವರಿಯಿತು. ‘ಆಸ್ತಿಗಾಗಿ ಮದುವೆ ನಾಟಕವಾಡಿದಳು. ಆದರೆ ಆತ(ಹಾರ್ದಿಕ್) ಬುದ್ದಿವಂತ. ತನ್ನ ಆಸ್ತಿಯನ್ನೆಲ್ಲಾ ತಾಯಿ ಹೆಸರಿಗೆ ಬರೆದಿಟ್ಟಿದ್ದಾನೆ’ ಎಂದು ಹಾರ್ದಿಕ್ ಗುಣಗಾನವನ್ನೇ ಮಾಡಲಾಯಿತು. ಆದರೆ, ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ನತಾಶಾ ಮಗನ ಆರೈಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹಾರ್ದಿಕ್ ತನ್ನ ಹೊಸ ಗೆಳೆತಿಯೊಂದಿಗೆ ಮತ್ತೊಂದು ನೆನಪು ಕಟ್ಟಲು ಹೊರಟಿದ್ದಾರೆ.

ಟಾಲಿವುಡ್ ನಟಿ ಸಮಂತಾ ಅವರ ವಿಚ್ಛೇಧನಕ್ಕೆ ಅಕ್ರಮ ಸಂಬಂಧ ಕಾರಣ ಎಂದು ಆರೋಪಿಸಲಾಯಿತು. ಜೀವನಾಂಶ ಪಡೆಯಲು ನಾಗಚೈತನ್ಯ ಮದುವೆಯಾದರು ಎಂದು ಹೇಳಾಯಿತು. ಆಕೆಯನ್ನು ‘ಸೆಕೆಂಡ್ ಹ್ಯಾಂಡ್ ಐಟಮ್’ ಎಂದು ಕೆಟ್ಟದಾಗಿ ಟ್ರೋಲ್ ಮಾಡಲಾಯಿತು.

ಚಂದನ್ ಶೆಟ್ಟಿ–ನಿವೇದಿತಾ ಗೌಡ ವಿಚ್ಛೇದನ ವಿಷಯದಲ್ಲಿಯೂ ನಿವೇದಿತಾ ಗೌಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಯಿತು. ಆಕೆಯ ಉಡುಗೆ–ತೊಡುಗೆಯನ್ನು ಉದಾರಿಸಿ ವಿಚ್ಛೇದನಕ್ಕೆ ಆಕೆಯೇ ಕಾರಣ ಎನ್ನಲಾಯಿತು.

ಇವರಲ್ಲಿ ಯಾರದ್ದು ತಪ್ಪು ಎಂದು ಯಾರಿಗೂ ತಿಳಿದಿಲ್ಲ. ಪ್ರೀತಿ–ಪ್ರೇಮದಲ್ಲಿ ವೈಮನಸ್ಸು ಬರುವುದು ಸಹಜ. ಸೆಲೆಬ್ರಿಟಿ ಆಗಲಿ, ಸಾಮಾನ್ಯರೇ ಆಗಲಿ ಪ್ರೀತಿಯಿಲ್ಲದ ಸಂಬಂಧದಲ್ಲಿ ಮುಂದುವರಿಯುದು ಸಾಧ್ಯವಿಲ್ಲ. ಅದಕ್ಕಾಗಿ ವಿಚ್ಛೇದನ ಪಡೆಯುತ್ತಾರೆ. ಆದರೆ ಇದ್ಯಾವುದರ ಬಗ್ಗೆಯೂ ಯೋಚಿಸದೇ ಹೆಣ್ಣನ್ನೇ ಗುರಿಪಡಿಸಲಾಗುತ್ತದೆ. ಇದರಿಂದ ಆಕೆಯ ಮಾನಸಿಕ ಸ್ಥಿತಿ ಮೇಲೆ ಯಾವ ಪರಿಣಾಮ ಬೀರಬಹುದೆಂಬ ಸಣ್ಣ ಕಾಳಜಿ ಇಲ್ಲದಿರುವುದು ನಿಜಕ್ಕೂ ವಿಷಾದನೀಯ.

ಸೆಲೆಬ್ರಿಟಿಯಾದರೂ ಅವರು ಕೂಡ ನಮ್ಮಂತೆ ಮನುಷ್ಯರು ಎಂಬುದನ್ನು ಮರೆಯಬಾರದು. ಅನಾದಿ ಕಾಲದಿಂದಲೂ ಹೆಣ್ಣನ್ನು ಶೋಷಿಸುವ ಮನಸ್ಥಿತಿ ಈಗಲೂ ಮುಂದುವರಿದಿದ್ದು ಈ ಸಮಾಜದ ಕಳಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.