ಬುಧವಾರ, ಜೂನ್ 23, 2021
21 °C

ಮೌಂಟ್‌ ಎವರೆಸ್ಟ್‌ ಏರುತ್ತಿದ್ದ ಇಬ್ಬರು ಪರ್ವತಾರೋಹಿಗಳ ಸಾವು

ಎಪಿ Updated:

ಅಕ್ಷರ ಗಾತ್ರ : | |

ಕಠ್ಮಂಡು: ವಿಶ್ವದ ಅತಿ ಎತ್ತರದ ಪವರ್ತವಾದ ಮೌಂಟ್‌ ಎವರೆಸ್ಟ್‌ ಏರುತ್ತಿದ್ದ ಸ್ವಿಸ್‌ ಮತ್ತು ಅಮೆರಿಕದ ತಲಾ ಒಬ್ಬರು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಸಂಘಟಕರು ಗುರುವಾರ ತಿಳಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಅಬ್ದುಲ್‌ ವಾರೈಚ್‌ (41) ಮತ್ತು ಅಮೆರಿಕದ ಪುವೆ ಲಿಯು (55) ಮೃತರಾದ ಪರ್ವತಾರೋಹಿಗಳು.

ಸದ್ಯ ಹವಾಮಾನ ಪರ್ವತಾರೋಹಿಗಳಿಗೆ ಪ್ರತಿಕೂಲವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬಹ್ರೇನ್‌ನ ರಾಜಕುಮಾರ ಮೊಹಮ್ಮದ್ ಹಮದ್ ಮೊಹಮ್ಮದ್ ಅಲ್ ಖಲೀಫಾ ನೇತೃತ್ವದ 16 ಸದಸ್ಯರ ಬಹ್ರೇನ್ ರಾಯಲ್ ಗಾರ್ಡ್ ತಂಡವು ಮಂಗಳವಾರ ಜಗತ್ತಿನ ಅತ್ಯುನ್ನತ ಶಿಖರ ಮೌಂಟ್‌ ಎವರೆಸ್ಟ್‌ನ್ನು ಆರೋಹಣ ಮಾಡಿತ್ತು. ಈ ಮೂಲಕ ಮೌಂಟ್‌ ಎವರೆಸ್ಟ್‌ನ ಪರಿಷ್ಕೃತ ಎತ್ತರವನ್ನು ಏರಿದ ಮೊದಲ ಅಂತರರಾಷ್ಟ್ರೀಯ ತಂಡ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು