ಶನಿವಾರ, ಮೇ 8, 2021
22 °C

ವಿಸ್ಕನ್‌ಸಿನ್‌ ಗುಂಡಿನ ದಾಳಿ: ಇಬ್ಬರ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಗ್ರೀನ್‌ ಬೇ(ಅಮೆರಿಕ): ‘ಇಲ್ಲಿನ ಗ್ರೀನ್‌ ಬೇ ಕ್ಯಾಸಿನೊದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಅಪರಿ‌ಚಿತನನ್ನು ಪೊಲೀಸರು ಗುಂಡಿಕ್ಕಿ ಕೊಂದರು’ ಎಂದು ವಿಸ್ಕನ್‌ಸಿನ್‌ ಅಧಿಕಾರಿಗಳು ತಿಳಿಸಿದರು.

ಗ್ರೀನ್‌ ಬೇ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಒನಿಡಾ ಕ್ಯಾಸಿನೊದಲ್ಲಿ ಶನಿವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ.

‘ಬಂದೂಕುಧಾರಿ, ನಿರ್ದಿಷ್ಟ ವ್ಯಕ್ತಿಯ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ. ಆದರೆ ಆ ವೇಳೆ ಕ್ಯಾಸಿನೊದಲ್ಲಿ ಆತ ಇರಲಿಲ್ಲ. ಹಾಗಾಗಿ ಆ ವ್ಯಕ್ತಿಯ ಸಹೋದ್ಯೋಗಿ ಮತ್ತು ಸ್ನೇಹಿತರ ಮೇಲೆ ದಾಳಿ ನಡೆಸಿರಬಹುದು’ ಎಂದು ಶಂಕಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು