ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದ ಬೆಳವಣಿಗೆ ಅಮೆರಿಕ ವಿದೇಶಾಂಗ ನೀತಿಯ ‌'ದೊಡ್ಡ ವೈಫಲ್ಯ': ಟ್ರಂಪ್

Last Updated 22 ಆಗಸ್ಟ್ 2021, 5:57 IST
ಅಕ್ಷರ ಗಾತ್ರ

ಅಲಬಾಮ: ಕೋವಿಡ್‌-19ನಿಂದ ಹೆಚ್ಚು ಹಾನಿಗೊಳಗಾಗಿರುವ ಅಲಬಾಮ ರಾಜ್ಯದಲ್ಲಿ ಬೃಹತ್‌ ರ‍್ಯಾಲಿ ನಡೆಸಿದ ಡೊನಾಲ್ಡ್‌ ಟ್ರಂಪ್‌, ಅಫ್ಗಾನಿಸ್ತಾನದಲ್ಲಿನ‌ ಬೆಳವಣಿಗೆಗಳು ಅಮೆರಿಕದ ವಿದೇಶಾಂಗ ನೀತಿಯ 'ದೊಡ್ಡ ವೈಫಲ್ಯ' ಎಂದು ಕಿಡಿ ಕಾರಿದ್ದಾರೆ.

'ಸೇವ್‌ ಅಮೆರಿಕ' ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ, ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯು 'ಅತಿ ದೊಡ್ಡ ಮುಜುಗರ' ಮತ್ತು ಅಮೆರಿಕದ ಇತಿಹಾಸದಲ್ಲೇ 'ವಿದೇಶಾಂಗ ನೀತಿಗೆ ಉಂಟಾದ ದೊಡ್ಡ ಅವಮಾನ' ಎಂದು ಟೀಕಿಸಿರುವುದಾಗಿ ಸ್ಪುಟ್ನಿಕ್‌ ವರದಿ ಮಾಡಿದೆ.

ಅಲಬಾಮದ ಪ್ರಮುಖ ನಗರವಾದ ಕಾಲ್ಮನ್‌ನಲ್ಲಿಕೋವಿಡ್‌ ಪ್ರಕರಣಗಳ ಏರಿಕೆಯಿಂದಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಆದಾಗ್ಯೂ ಟ್ರಂಪ್‌ ರ‍್ಯಾಲಿ ನಡೆಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅಫ್ಗಾನಿಸ್ತಾನದಲ್ಲಿನ ಯುಎಸ್‌ ಸೇನಾ ನೆಲೆಗಳನ್ನುಬಿಟ್ಟುಕೊಟ್ಟಿದ್ದಾರೆ ಎಂದು ಕಿಡಿ ಕಾರಿರುವ ಟ್ರಂಪ್‌, ಅಮೆರಿಕ ಸೇನೆಯು 83 ಬಿಲಿಯನ್‌ ಡಾಲರ್‌ (6.17 ಲಕ್ಷ ಕೋಟಿ) ಮೊತ್ತದ ರಕ್ಷಣಾ ಉಪಕರಣಗಳನ್ನು ಬಿಟ್ಟು ಹೊರನಡೆಯುತ್ತಿದೆ ಎಂದು ಒತ್ತಿ ಹೇಳಿದ್ದಾರೆ.

ಸೇನೆಯನ್ನು ಹಿಂಪಡೆಯುತ್ತಿರುವುದು 'ಸಂಪೂರ್ಣ ಶರಣಾಗತಿ' ಮತ್ತು 'ದೇಶದ ನಾಯಕನ ಅಸಮರ್ಥತೆ'ಯಾಗಿದೆ. 'ಇದು ಸೇನೆಯ ಸಾರ್ವಕಾಲಿಕ ಸೋಲುಗಳಲ್ಲಿ ಒಂದಾಗಲಿದೆ' ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರಿದು,ತಾವು ಅಧಿಕಾರದಲ್ಲಿದ್ದಿದ್ದರೆ,ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ತಾಲಿಬಾನ್‌ ಸಂಘಟನೆ ಇತ್ತೀಚೆಗೆ ಅಫ್ಗಾನಿಸ್ತಾನದಆಡಳಿತವನ್ನು ವಶಕ್ಕೆ ಪಡೆದಿದೆ. ಹೀಗಾಗಿಅಫ್ಗಾನ್‌ನಲ್ಲಿ ಕಳೆದ ಎರಡು ದಶಕಗಳಿಂದ ಯುಎಸ್‌ ಸೇನಾ ಪಡೆಗಳಿಗೆನೆರವು ನೀಡಿದ್ದ ತನ್ನ ನಾಗರಿಕರು ಮತ್ತು ಅಫ್ಗನ್ನರನ್ನು ಅಮೆರಿಕ ವಾಪಸ್‌ ಕರೆಸಿಕೊಳ್ಳುತ್ತಿದೆ.

ಯುಎಸ್‌ ಸೇನೆ ಹಿಂಪಡೆದುಕೊಂಡದ್ದುಅಫ್ಗಾನ್ ಸರ್ಕಾರ ಪತನಗೊಳ್ಳಲು ಕಾರಣ ಎಂದು ಬೈಡನ್‌ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಬೈಡನ್‌, ಈ ವರ್ಷದ ಮೇ1ರೊಳಗೆ ಸಂಪೂರ್ಣ ಸೇನೆಯನ್ನು ಅಫ್ಗಾನ್‌ನಿಂದ ಹಿಂಪಡೆಯಲಾಗುವುದು ಎಂದು ಹಿಂದಿನ ಟ್ರಂಪ್‌ ಸರ್ಕಾರ ಗಡುವು ನಿಗದಿ ಮಾಡಿತ್ತು. ಇದು ಸೇನೆ ವಾಪಸಾತಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಟ್ರಂಪ್‌ ಸರ್ಕಾರ ನಿಗದಿ ಮಾಡಿದ್ದ ಗಡುವನ್ನು ಸೆಪ್ಟೆಂಬರ್‌1ರ ವರೆಗೆ ವಿಸ್ತರಿಸಿದ್ದ ಬೈಡನ್‌, ಆಗಸ್ಟ್‌ 31ರೊಳಗೆ ಸಂಪೂರ್ಣ ಸೇನೆ ವಾಪಸ್‌ ಕರೆಸಿಕೊಳ್ಳುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT