ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೋಶಿಮಾ ಮೇಲಿನ ಅಣುಬಾಂಬ್‌ ದಾಳಿಗೆ 76 ವರ್ಷ

Last Updated 6 ಆಗಸ್ಟ್ 2021, 10:13 IST
ಅಕ್ಷರ ಗಾತ್ರ

ಟೋಕಿಯೊ: ಜಾಗತಿಕ ನಾಯಕರು ಹೇಗೆ ಕೊರೊನಾದ ವಿರುದ್ಧ ಒಗ್ಗೂಡಿದ್ದಾರೋ ಅದೇ ರೀತಿ ಪರಮಾಣು ಶಸ್ತ್ರಾಸ್ತ್ರಗಳನ್ನು ತೆಗೆದು ಹಾಕಲು ಒಂದಾಗಬೇಕು ಎಂದು ಹಿರೋಶಿಮಾದ ಮೇಯರ್‌ ಕಝಮಿ ಮಾಟ್ಸುಯಿ ಒತ್ತಾಯಿಸಿದರು.

ಹಿರೋಶಿಮಾ ಮೇಲೆ ನಡೆದ ವಿಶ್ವದ ಮೊದಲ ಅಣುಬಾಂಬ್ ದಾಳಿಯ 76ನೇ ವರ್ಷದ ಅಂಗವಾಗಿ ಶಾಂತಿ ಸ್ಮಾರಕ ಉದ್ಯಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯುದ್ಧಗಳನ್ನು ಗೆಲ್ಲಲು ಸಿದ್ಧಗೊಳಿಸುವ ಈ ಶಸ್ತ್ರಾಸ್ತ್ರ ಅತಿ ಅಪಾಯಕಾರಿಯಾಗಿದೆ. ಎಲ್ಲಾ ರಾಷ್ಟ್ರಗಳು ಒಂದಾದರೆ, ಇದನ್ನು ನಾವು ಅಂತ್ಯಗೊಳಿಸಬಹುದು. ಈ ಶಸ್ತ್ರಾಸ್ತ್ರಗಳಿಂದ ಸ್ಥಿರ ಸಮಾಜವನ್ನು ರೂಪಿಸಲು ಸಾಧ್ಯವಿಲ್ಲ’ ಎಂದರು.

‘ಮಾನವೀಯತೆಗೆ ಅಪಾಯಕಾರಿಯಾಗಿರುವ ಕೋವಿಡ್‌ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡಿದಂತೆ ಪರಮಾಣು ನಿಶಸ್ತ್ರೀಕರಣಕ್ಕಾಗಿಯೂ ಎಲ್ಲರೂ ಜತೆಯಾಗಬೇಕು’ ಎಂದು ಅವರು ಕರೆ ನೀಡಿದರು.

ಅಲ್ಲದೆ ಜಪಾನ್‌ ಸರ್ಕಾರವು ಪರಮಾಣು ಶಸ್ತ್ರಾಸ್ತ್ರ ನಿಷೇಧ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ‘ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಮತ್ತು ಹೊಂದದಿರುವ ರಾಷ್ಟ್ರಗಳನ್ನು ಒಗ್ಗೂಡಿಸಲು ವಾಸ್ತವಿಕ ವಿಧಾನದ ಅಗತ್ಯವಿದೆ. ಅದಕ್ಕಾಗಿ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದವನ್ನು(ಎನ್‌ಪಿಟಿ) ಇನ್ನಷ್ಟು ಸದೃಢಗೊಳಿಸಬೇಕು’ ಎಂದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಗಾ, ಒಪ್ಪಂದಕ್ಕೆ ಸಹಿ ಹಾಕುವ ಯಾವುದೇ ಯೋಜನೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT