ಶುಕ್ರವಾರ, ಫೆಬ್ರವರಿ 3, 2023
25 °C

ಸರ್ಕಾರದ ವಿರುದ್ಧ ಪ್ರತಿಭಟನೆ; ವರದಿ ಮಾಡಿದ ಪತ್ರಕರ್ತನ ಬಂಧಿಸಿದ ಚೀನಾ ಪೊಲೀಸ್

ರಾಯಿಟರ್ಸ್‌‌‌ Updated:

ಅಕ್ಷರ ಗಾತ್ರ : | |

ಲಂಡನ್: ಶಾಂಘೈನಲ್ಲಿ ಭಾನುವಾರ ನಡೆಯುತ್ತಿದ್ದ ಪ್ರತಿಭಟನೆಯ ವರದಿಗಾರಿಕೆಯಲ್ಲಿ ನಿರತರಾಗಿದ್ದ ತನ್ನ ಪತ್ರಕರ್ತನ ಮೇಲೆ ಚೀನಾ ಪೊಲೀಸರು ಹಲ್ಲೆ ನಡೆಸಿ, ಬಂಧಿಸಿದ್ದಾರೆ ಎಂದು ಬಿಬಿಸಿ ಹೇಳಿದೆ.

ಈ ಸಂಬಂಧ ಬಿಬಿಸಿಯ ವಕ್ತಾರ ಹೇಳಿಕೆ ಬಿಡುಗಡೆ ಮಾಡಿದ್ದು, 'ಶಾಂಘೈ ಪ್ರತಿಭಟನೆ ವೇಳೆ ವರದಿ ಮಾಡುತ್ತಿದ್ದ ನಮ್ಮ ಪತ್ರಕರ್ತ ಎಡ್‌ ಲಾರೆನ್ಸ್‌ ಅವರಿಗೆ ಬೇಡಿ ತೊಡಿಸಿ ಬಂಧಿಸಲಾಯಿತು. ಅವರ ಚಿಕಿತ್ಸೆಯ ಬಗ್ಗೆ ಕಳವಳಗೊಂಡಿದ್ದೇವೆ. ಅವರನ್ನು ಕೆಲವು ಗಂಟೆಗಳ ಕಾಲ ವಶದಲ್ಲಿ ಇರಿಸಿಕೊಳ್ಳಲಾಗಿತ್ತು. ಬಂಧಿಸುವ ವೇಳೆ ಲಾರೆನ್ಸ್‌ ಅವರಿಗೆ ಪೊಲೀಸರು ಒದ್ದಿದ್ದಾರೆ. ಮಾನ್ಯತೆ ಹೊಂದಿರುವ ಪತ್ರಕರ್ತರಾಗಿ ಅವರು ಕೆಲಸ ಮಾಡುವ ವೇಳೆ ಇದು ನಡೆದಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿವೆ. ಹೀಗಾಗಿ ಅಲ್ಲಿನ ಸರ್ಕಾರ ಶಾಂಘೈ ಸೇರಿದಂತೆ ಹಲವು ನಗರಗಳಲ್ಲಿ ಕಠಿಣ ಲಾಕ್‌ಡೌನ್‌ ಹೇರಿದೆ. ಇದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪತ್ರಕರ್ತನ ಬಂಧನ ಸಂದರ್ಭದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಸಿ, 'ಜನಸಂದಣಿಯಿಂದ ಕೋವಿಡ್‌ ತಗುಲದಂತೆ ರಕ್ಷಿಸಲು ಅವರನ್ನು ಬಂಧಿಸಲಾಯಿತು ಎಂದು ಪತ್ರಕರ್ತನನ್ನು ಬಿಡುಗಡೆ ಮಾಡಿದ ಅಧಿಕಾರಿ ಹೇಳಿದ್ದಾರೆ. ಅದನ್ನು ಹೊರತುಪಡಿಸಿ, ಚೀನಾದ ಆಡಳಿತದಿಂದ ಅಧಿಕೃತ ವಿವರಣೆಯಾಗಲೀ, ಕ್ಷಮಾಪಣೆಯಾಗಲಿ ಬಂದಿಲ್ಲ' ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು