ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಲಾಂಡ್‌: ಮೃಗಾಲಯದ ಪ್ರಾಣಿಗಳಿಗೆ ಕೋವಿಡ್‌ ಲಸಿಕೆ

ಪ್ರಾಣಿಗಳನ್ನು ಸೋಂಕಿನಿಂದ ರಕ್ಷಿಸಲು ಪ್ರಾಯೋಗಿಕವಾಗಿ ಲಸಿಕೆ ಅಭಿಯಾನ ಆರಂಭ
Last Updated 4 ಜುಲೈ 2021, 5:57 IST
ಅಕ್ಷರ ಗಾತ್ರ

ಆಕ್ಲಾಂಡ್‌: ಪ್ರಾಣಿಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಸ್ಯಾನ್‌ಫ್ರಾನ್ಸಿಸ್ಕೊದ ಬೇ ಏರಿಯಾದ ಮೃಗಾಲಯದಲ್ಲಿರುವ ಕರಡಿ, ಸಿಂಹ, ಚಿರತೆ ಮತ್ತಿತರ ಪ್ರಾಣಿಗಳಿಗೆ ಪ್ರಾಯೋಗಿಕವಾಗಿ ಲಸಿಕೆ ನೀಡಲು ಆರಂಭಿಸಲಾಗಿದೆ.

ಈ ವಾರ ಮೊದಲಿಗೆ ಹೆಣ್ಣು ಹುಲಿ ಮತ್ತು ಮೊಲ್ಲಿ ಪ್ರಾಣಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಸ್ಯಾನ್‌ಫ್ರಾನ್ಸಿಸ್ಕೊ ಕ್ರಾನಿಕಲ್ ಪತ್ರಿಕೆ ಶನಿವಾರ ವರದಿ ಮಾಡಿದೆ.

ವಿವಿಧ ಪ್ರಾಣಿ ಪ್ರಭೇದಗಳನ್ನು ರಕ್ಷಿಸುವ ರಾಷ್ಟ್ರೀಯ ಅಭಿಯಾನದ ಭಾಗವಾಗಿ ಕೈಗೊಂಡಿರುವ ಅಭಿಯಾನಕ್ಕೆ ನ್ಯೂಜೆರ್ಸಿಯ ಪಶುವೈದ್ಯಕೀಯ ಔಷಧ ಕಂಪನಿ ಜೊಯಿಟಿಸ್‌, ಲಸಿಕೆಯನ್ನು ಅಭಿವೃದ್ಧಿಪಡಿಸಿ ದೇಣಿಗೆಯಾಗಿ ನೀಡಿದೆ.

ಮೃಗಾಲಯದ ಪಶುವೈದ್ಯಕೀಯ ಸೇವೆಗಳ ಉಪಾಧ್ಯಕ್ಷ ಅಲೆಕ್ಸ್ ಹರ್ಮನ್, ‘ಮೃಗಾಲಯದಲ್ಲಿರುವ ಯಾವುದೇ ಪ್ರಾಣಿಗಳಿಗೆ ವೈರಾಣು ಸೋಂಕು ತಗುಲಿಲ್ಲ. ಅವುಗಳನ್ನು ಸೋಂಕಿನಿಂದ ರಕ್ಷಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಗಳನ್ನು ನೀಡಲಾಗುತ್ತಿದೆ. ಈಗ ಹುಲಿಗಳು, ಕಪ್ಪು, ಕರಡಿಗಳು, ಸಿಂಹಗಳು ಮತ್ತು ಫೆರೆಟ್‌ಗಳಿಗೆ ಒಂದು ಡೋಸ್‌ ಲಸಿಕೆಯನ್ನು ನೀಡಲಾಗಿದೆ. ಮುಂದೆ ಸಸ್ತನಿಗಳಿಗೆ ನೀಡಲಾಗುತ್ತದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT