ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಪ್ರಭಾವ: ಅಮೆರಿಕ ಸಂಸತ್ತಿನಲ್ಲಿ ಹಲವು ಮಸೂದೆಗಳ ಮಂಡನೆ

Last Updated 19 ಫೆಬ್ರುವರಿ 2021, 8:05 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವೃದ್ಧಿಯಾಗುತ್ತಿರುವ ಚೀನಾದ ಪ್ರಭಾವವನ್ನು ಸಮರ್ಥವಾಗಿ ಎದುರಿಸಲು ಅಮೆರಿಕದ ರಿಪಬ್ಲಿಕ್‌ ಪಕ್ಷದ ಸಂಸದರು 12ಕ್ಕೂ ಅಧಿಕ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ.

ಅಮೆರಿಕ ಮತ್ತು ಚೀನಾ ದೇಶಗಳ ನಡುವೆ ಮೊದಲಿನಿಂದಲೂ ಉತ್ತಮ ಸಂಬಂಧ ಇಲ್ಲ. ಎರಡೂ ದೇಶಗಳ ನಡುವೆ ಇತ್ತೀಚೆಗೆ ಕೊರೊನಾ ಮೂಲಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿತ್ತು. ಅಲ್ಲದೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ಮಿಲಿಟರಿ ನಡೆಗಳು, ಮಾನವ ಹಕ್ಕು ವಿಷಯಗಳ ಬಗ್ಗೆಯೂ ವಾಕ್‌ಸಮರ ನಡೆದಿತ್ತು. ಇದರ ಪರಿಣಾಮ ಉಭಯ ದೇಶಗಳ ವ್ಯಾಪಾರ ವಹಿವಾಟಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು.

ಇದೀಗ ಅಮೆರಿಕದ ಸಂಸದರು ಚೀನಾ ಪ್ರಭಾವವನ್ನು ಎದುರಿಸಲು ಹೊಸ ಮಸೂದೆಗಳನ್ನು ಮಂಡಿಸಿದ್ದಾರೆ.

ಸಂಸದ ರಿಕ್ ಸ್ಕಾಟ್ ಅವರು, ಕಮ್ಯುನಿಸ್ಟ್ ಚೀನಾದಿಂದ ತೈವಾನ್‌ ರಕ್ಷಿಸಲು ತೈವಾನ್ ಆಕ್ರಮಣ ತಡೆಗಟ್ಟುವಿಕೆ ಕಾಯ್ದೆಯನ್ನು ಪುನಃ ಮಂಡಿಸಿದರು.

ಐದು ಮಸೂದೆಗಳನ್ನು ಮಂಡಿಸಿದ ಸಂಸದ ಮಾರ್ಕ್‌ ಗ್ರೀನ್‌ ಅವರು, ಕಮ್ಯುನಿಸ್ಟ್‌ ಚೀನಾ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಾಗಿ ಬೆಳೆದಿದ್ದು, ಅಮೆರಿಕದ ಭದ್ರತೆಗೆ ಸವಾಲು ಹಾಕುತ್ತಿದೆ. ರಾಜತಾಂತ್ರಿಕ, ಮಾಹಿತಿ, ಮಿಲಿಟರಿ ಮತ್ತು ಆರ್ಥಿಕವಾಗಿಯೂ ಚೀನಾ ಪ್ರಾಬಲ್ಯತೆ ಮೆರೆಯಲು ಮುಂದಾಗಿದೆ. ಚೀನಾದ ತಂತ್ರಗಳಿಂದ ಅಮೆರಿಕದ ರಕ್ಷಣಾ ಕಂಪನಿಗಳನ್ನು ರಕ್ಷಿಸಿಕೊಳ್ಳಬೇಕಿದೆ. ಚೀನಾದ ತಂತ್ರಜ್ಞಾನ ವರ್ಗಾವಣೆ ಮೇಲೆ ನಿಯಂತ್ರಣ ಹೇರಬೇಕಿದೆ. ಜತೆಗೆ ಚೀನಾ ಸಾಲ ಮರುಪಾವತಿಗೆ ಕ್ರಮ ಕೈಗೊಳ್ಳಬೇಕಿದೆ. ನಮ್ಮ ಬೌದ್ಧಿಕ ಆಸ್ತಿಯನ್ನು ಕಾಪಾಡಿಕೊಳ್ಳಬೇಕಿದೆ. ಈ ವಿಷಯಗಳ ಬಗ್ಗೆ ನಾನು ಮಂಡಿಸಿರುವ ಮಸೂದೆಗಳು ಗಮನ ಹರಿಸುತ್ತವೆ ಎಂದರು.

ಇನ್ನೂ ಐದು ಮಸೂದೆಗಳನ್ನು ಮಂಡಿಸಿದ ಸಂಸದ ಜಿಮ್‌ ಬ್ಯಾಂಕ್‌ ಅವರು, ಚೀನಾದ ಕಮ್ಯುನಿಷ್ಟ್‌ ಪಕ್ಷವು ಅಮೆರಿಕದ ಸ್ವಾತಂತ್ರ್ಯ ಮತ್ತು ನ್ಯಾಯಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದರು.

ಚೀನಾದಲ್ಲಿ ಬಲವಂತದ ದುಡಿಮೆಯಿಂದ ತಯಾರಿಸಿದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವ ಮಸೂದೆಯನ್ನು ಸಂಸದ ಜೇಮ್ಸ್‌ ಪಿ. ಮೆಕ್‌ಗವರ್ನ್ ಮಂಡಿಸಿದರು.

ಸಂಸದ ರೊನಿ ಜಾಕ್ಸನ್ ಅವರು ಚೀನೀ ಮಿಲಿಟರಿ ಕಂಪನಿಗಳೊಂದಿಗೆ ವ್ಯವಹಾರ ತಡೆ ಕಾಯ್ದೆಯ ಮಸೂದೆಯನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT