ಬುಧವಾರ, ಜೂನ್ 29, 2022
27 °C

ಬಾಹ್ಯಾಕಾಶ ಸಹಕಾರ: ಬ್ರಿಕ್ಸ್‌ ಜಂಟಿ ಸಮಿತಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌ (ಪಿಟಿಐ): ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಬಾಹ್ಯಾಕಾಶ ಸಹಕಾರದ ಜಂಟಿ ಸಮಿತಿಯನ್ನು ಬುಧವಾರ ಅಧಿಕೃತವಾಗಿ ಪ್ರಾರಂಭಿಸಿವೆ.

ಬ್ರಿಕ್ಸ್ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ದೂರಸಂವೇದಿ ಉಪಗ್ರಹ ಪರಿವೀಕ್ಷಣೆ ಮತ್ತು ದತ್ತಾಂಶ ಹಂಚಿಕೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಉದ್ದೇಶದಿಂದ ಈ ಜಂಟಿ ಸಮಿತಿ ಪ್ರಾರಂಭಿಸಿವೆ. ಕಳೆದ ಆಗಸ್ಟ್‌ನಲ್ಲಿ, ಬ್ರಿಕ್ಸ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಸಮೂಹ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ವರ್ಷದ ಅಧ್ಯಕ್ಷ ಸ್ಥಾನ ಚೀನಾಕ್ಕೆ ಸಿಕ್ಕಿದೆ. 

ಬುಧವಾರ ನಡೆದ ಸಮಿತಿಯ ಮೊದಲ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಮುಖ್ಯಸ್ಥ ಜಾಂಗ್ ಕೆಜಿಯಾನ್, ‘ಸದಸ್ಯ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿ ಬ್ರಿಕ್ಸ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಸಮೂಹ ಸಹಕರಿಸಲು ಈ ಮಂಡಳಿ ಸೂಕ್ತ ಮಾರ್ಗದರ್ಶನ ಮಾಡಲಿದೆ’ ಎಂದು ಹೇಳಿದರು.

ಸಮರ್ಥ ದತ್ತಾಂಶ ಹಂಚಿಕೆ ಮತ್ತು ಬಳಕೆಯೊಂದಿಗೆ ಹವಾಮಾನ ಬದಲಾವಣೆ ನಿಭಾಯಿಸಲು, ಪರಿಸರ ಸಂರಕ್ಷಣೆ ಹಾಗೂ ವಿಪತ್ತು ತಡೆಗಟ್ಟಲು ಬ್ರಿಕ್ಸ್ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಾಗಿ ಮತ್ತು ಹೆಚ್ಚು ನಿಕಟವಾಗಿ ಕೆಲಸ ಮಾಡುವಂತೆ ಹೊಸ ಜಂಟಿ ಸಮಿತಿಯು ಸಹಕರಿಸಲಿದೆ ಎಂದು ಝಾಂಗ್ ಹೇಳಿರುವುದಾಗಿ ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಷಿನುವಾ ವರದಿ ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು