ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಮಕ್ಕಳ ಲಸಿಕೆಗೆ ಅನುಮೋದನೆ: 17 ವರ್ಷದ ಒಳಗಿನವರಿಗೆ ‘ಕೊರೊನಾವ್ಯಾಕ್‌’

Last Updated 6 ಜೂನ್ 2021, 11:00 IST
ಅಕ್ಷರ ಗಾತ್ರ

ಬೀಜಿಂಗ್‌: 3ರಿಂದ 17 ವರ್ಷದ ಒಳಗಿನ ಮಕ್ಕಳಿಗೆ ‘ಕೊರೊನಾವ್ಯಾಕ್‌’ ಲಸಿಕೆಯನ್ನು ತುರ್ತು ಬಳಸಲು ಚೀನಾ ಅನುಮೋದನೆ ನೀಡಿದೆ.

ಕೋವಿಡ್‌–19 ವಿರುದ್ಧ ಈ ಲಸಿಕೆಯನ್ನು ಚೀನಾದ ಸಿನೊವ್ಯಾಕ್‌ ಕಂಪನಿ ತಯಾರಿಸಿದೆ.

‘ಸಿನೊವ್ಯಾಕ್‌ ಮೊದಲ ಮತ್ತು ಎರಡನೇ ಹಂತದ ಕ್ಲಿನಕಲ್‌ ಸಂಶೋಧನೆಗಳನ್ನು ಕೈಗೊಂಡಿದೆ. ಈ ವಯೋಮಿತಿಯಲ್ಲಿನ ನೂರಾರು ಸ್ವಯಂ ಸೇವಕರ ಮೇಲೆ ಪ್ರಯೋಗ ಕೈಗೊಳ್ಳಲಾಗಿದೆ. ಈ ಲಸಿಕೆಯು ಸುರಕ್ಷಿತ ಮತ್ತು ಸಮರ್ಥವಾಗಿದೆ ಎನ್ನುವುದು ಪ್ರಯೋಗದ ಸಂದರ್ಭದಲ್ಲಿ ಸಾಬೀತಾಗಿದೆ’ ಎಂದು ಸಿನೊವ್ಯಾಕ್‌ ಕಂಪನಿ ಅಧ್ಯಕ್ಷ ಯಿನ್‌ ವಿಯಿಡಾಂಗ್‌ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್‌ಒ) ಜೂನ್‌ 1ರಂದು ಸಿನೊವ್ಯಾಕ್‌ ಕಂಪನಿಯ ಲಸಿಕೆಗೆ ಅನುಮೋದನೆ ನೀಡಿತ್ತು. ಇದು ಚೀನಾದ ಎರಡನೇ ಲಸಿಕೆಯಾಗಿತ್ತು. ಈ ಮೊದಲು, ಡಬ್ಲ್ಯೂಎಚ್‌ಒ ಸಿನೊಫಾರ್ಮಾ ಕಂಪನಿಯ ಲಸಿಕೆಗೆ ಅನುಮೋದನೆ ನೀಡಿತ್ತು.

ರಾಜತಾಂತ್ರಿಕದ ಭಾಗವಾಗಿ ಚೀನಾ ಹಲವು ರಾಷ್ಟ್ರಗಳಿಗೆ ಲಸಿಕೆಯನ್ನು ದೇಣಿಗೆ ನೀಡುತ್ತಿದೆ ಮತ್ತು ರಫ್ತು ಮಾಡುತ್ತಿದೆ.

ಚೀನಾದಲ್ಲಿ ಇದುವರೆಗೆ 76.3 ಕೋಟಿ ಮಂದಿಗೆ ಕೋವಿಡ್‌–19 ಲಸಿಕೆಯ ಡೋಸ್‌ಗಳನ್ನು ಹಾಕಲಾಗಿದೆ. ಚೀನಾ ಇದುವರೆಗೆ ಐದು ಲಸಿಕೆಗಳಿಗೆ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT