ಶನಿವಾರ, ಮಾರ್ಚ್ 6, 2021
28 °C
ಹೊಸ ವರ್ಷಾಚರಣೆ ಹಿನ್ನೆಲೆ, ಕೊರೊನಾ ಸೋಂಕು ಏರುವ ಸಾಧ್ಯತೆ ಹಿನ್ನೆಲೆ

ಕೊರೊನಾ: ಚೀನಾದಲ್ಲಿ ಮೂರು ಸಾವಿರ ಹೊಸ ಕ್ವಾರಂಟೈನ್ ಘಟಕಗಳು

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ಆ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಉತ್ತರ ಚೀನಾದ ನಗರದಲ್ಲಿ ಕ್ಯಾರಂಟೈನ್ ಸೌಲಭ್ಯವಿರುವ 3ಸಾವಿರ ಘಟಕಗಳನ್ನು ನಿರ್ಮಿಸಲಾಗುತ್ತಿದೆ.

ಹೆಬೈ ಪ್ರಾಂತ್ಯದ ರಾಜಧಾನಿ ಶಿಜಿಯಾಝುವಾಂಗ್‌ ನಗರದ ಹೊರವಲಯದ ಕೃಷಿಭೂಮಿಯಲ್ಲಿ ಹೊಸ ಕ್ವಾರಂಟೈನ್ ಕೇಂದ್ರಗಳ ನಿರ್ಮಾಣ ಚಟುವಟಿಕೆಯನ್ನು ರಾಜ್ಯದ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಈ ಪ್ರಕಾರ, ರಾಜಧಾನಿಯ ಹೊರವಲಯದಲ್ಲಿ ಕೃಷಿ ಭೂಮಿಯನ್ನು ನೆಲಸಮ ಮಾಡುತ್ತಾ, ಕಾಂಕ್ರೀಟ್ ಸುರಿಯುವುದು ಹಾಗೂ ರೆಡಿಮೇಡ್‌ ಕೊಠಡಿಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.  

ಕಳೆದ ವರ್ಷ ವುಹಾನ್‌ ನಗರದಲ್ಲಿ ಕೊರೊನಾ ಸೋಂಕು ಉಲ್ಬಣವಾದಾಗ, ಚೀನಾ, ನಗರದ ಹೊರ ವಲಯದಲ್ಲಿ ರಾತ್ರೊ ರಾತ್ರಿ ಆಸ್ಪತ್ರೆಗಳನ್ನು ನಿರ್ಮಿಸಿತ್ತು. ಜಿಮ್ನಾಷಿಯಂಗಳನ್ನೇ ಐಸೊಲೇಷನ್ / ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದನ್ನು ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು