ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ಇನ್ನಷ್ಟು ಧನಸಹಾಯ: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಭರವಸೆ

Last Updated 7 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೀಜಿಂಗ್‌: ಪಾಕಿಸ್ತಾನಕ್ಕೆ 9 ಬಿಲಿಯನ್ ಡಾಲರ್‌ ಅನ್ನು ಸೋಮವಾರ ವಿಶೇಷ ಪ್ಯಾಕೇಜ್‌ ನೀಡಿದ ಚೀನಾ, ದೇಶದ ಆರ್ಥಿಕತೆ ಕುಸಿಯದಂತೆ ನೋಡಿಕೊಳ್ಳಲು ಇನ್ನಷ್ಟು ಸಹಾಯ ಒದಗಿಸುವುದಾಗಿ ಭರವಸೆ ನೀಡಿದೆ.

ದೇಶದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜು 35 ಬಿಲಿಯನ್ ಡಾಲರ್‌ ಹಣಕಾಸು ಸಹಾಯವನ್ನು ಚೀನಾ ಹಾಗೂ ಸೌದಿ ಅರೇಬಿಯಾದಿಂದ ಪಾಕಿಸ್ತಾನ ಸಾಲ ರೂಪದಲ್ಲಿ ಪಡೆಯುತ್ತಿದೆ.

ನ.3ರಂದು ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ ಅವರು ಚೀನಾಕ್ಕೆ ಭೇಟಿ ನೀಡಿದ್ದಾಗ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು, ‘ಚಿಂತಿಸಬೇಡಿ ನಾವು ನಿಮ್ಮ ಜೊತೆ ಇದ್ದೇವೆ’ ಎಂದು ಹೇಳಿದ್ದರು. ಅದರಂತೆ ಪಾಕಿಸ್ತಾನ ಈಗ ಚೀನಾದಿಂದ 9 ಬಿಲಿಯನ್ ಡಾಲರ್ ಹಾಗೂ ಸೌದಿ ಅರೇಬಿಯಾದಿಂದ 4 ಬಿಲಿಯನ್ ಡಾಲರ್‌ ಪಡೆಯುತ್ತಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜ್ಹೋ ಲಿಜಿಯಾನ್ ಮಾಹಿತಿ ನೀಡಿದ್ದಾರೆ.

ಐಎಂಎಫ್‌ ಮಾಹಿತಿ ಪ್ರಕಾರ, ಪಾಕಿಸ್ತಾನದ ಒಟ್ಟು ನಾನ್ ಪ್ಯಾರಿಸ್ ಕ್ಲಬ್‌ ಸಾಲದ ಮೊತ್ತವು 27 ಬಿಲಿಯನ್ ಡಾಲರ್‌ ಇದ್ದು, ಇದರಲ್ಲಿ 23 ಬಿಲಿಯನ್ ಡಾಲರ್‌ ಚೀನಾದ ಸಾಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT