ಭಾನುವಾರ, ನವೆಂಬರ್ 29, 2020
20 °C

ಕೋವಿಡ್‌ ಪರಿಣಾಮ: ಇಂಟರ್‌ಪೋಲ್‌ನ 89ನೇ ಸಾಮಾನ್ಯ ಸಭೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಜಾಗತಿಕವಾಗಿ ಕೋವಿಡ್‌–19 ಸೋಂಕು ಹೆಚ್ಚಾಗಿ ಹರಡುತ್ತಿರುವುದರ ಪರಿಣಾಮ ಇಂಟರ್‌ಪೋಲ್‌ನ 89ನೇ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಇಂಟರ್‌ಪೋಲ್‌ ತಿಳಿಸಿದೆ.

89ನೇ ಸಾಮಾನ್ಯ ಸಭೆ (ವಾರ್ಷಿಕ ಸಭೆ) ಬರುವ ಡಿಸೆಂಬರ್ ತಿಂಗಳಲ್ಲಿ ಯುಎಇನಲ್ಲಿ ನಿಗಧಿಯಾಗಿತ್ತು. ಈ ಮಹತ್ವದ ಸಭೆಯಲ್ಲಿ ಇಂಟರ್‌ಪೋಲ್‌ನ 194 ಸದಸ್ಯ ರಾಷ್ಟ್ರಗಳು ಭಾಗವಹಿಸುತ್ತಿದ್ದವು. ಕೋವಿಡ್‌ ಕಾರಣದಿಂದಾಗಿ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಇಂಟರ್‌ಪೋಲ್‌ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಕಾನೂನು ಮತ್ತು ತಾಂತ್ರಿಕ ಕಾರಣಗಳಿಂದಾಗಿ ಯುಎಇ ಮಾತ್ರವಲ್ಲದೇ ಜಗತ್ತಿನ ಯಾವುದೇ ದೇಶದಲ್ಲೂ ಈ ಸಲ ಸಾಮಾನ್ಯ ಸಭೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಇಂಟರ್‌ಪೋಲ್‌ನ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯಕ್ಕೆ ವರ್ಚುವಲ್‌ ಸಭೆಯನ್ನು ಕೂಡ ನಡೆಸಲು ಸಾಧ್ಯವಿಲ್ಲ ಎಂದು ಇಂಟರ್‌ಪೋಲ್‌ ಹೇಳಿದೆ.

ಭಯೋತ್ಪಾದನೆ, ಜಾಗತಿಕ ಅಪರಾಧ ಮತ್ತು ಅಪರಾಧ ಜಾಲಗಳು, ಅಪರಾಧಿಗಳ ವಿನಿಮಯ ಕುರಿತಂತೆ ಇಂಟರ್‌ಪೋಲ್‌ನ ಸದಸ್ಯ ದೇಶಗಳ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಈ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸುತ್ತಾರೆ.

ಇಂಟರ್‌ಪೋಲನ್‌ ಸಾಮಾನ್ಯ ಸಭೆಯನ್ನು ಮಾತ್ರ ಮುಂದೂಡಲಾಗಿದೆ, ಆದರೆ ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದ ಕೆಲಸಗಳು ಎಂದಿನಂತೆ ಮುಂದುವರೆಯುತ್ತವೆ ಎಂದು ಇಂಟರ್‌ಪೋಲ್‌ ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ತಿಳಿಸಿದ್ದಾರೆ.

ಕೋವಿಡ್‌ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ. ಇಂಟರ್‌ಪೋಲ್‌ನ 91ನೇ ಸಾಮಾನ್ಯ ಸಭೆಯ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಈ ಸಭೆ 2022ರಲ್ಲಿ ನಡೆಯಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು