ಶುಕ್ರವಾರ, ಆಗಸ್ಟ್ 12, 2022
20 °C

Covid-19 World Update | 3.10 ಕೋಟಿಗೂ ಹೆಚ್ಚು ಜನ ಗುಣಮುಖ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ‌ವಿಶ್ವದಲ್ಲಿ ಈ ವರೆಗೆ ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರ ಸಂಖ್ಯೆ 4.17 ಕೋಟಿ ದಾಟಿದ್ದು, ಮಹಾಮಾರಿಗೆ ಈವರೆಗೆ 11,39,647 ಮಂದಿ ಪ್ರಾಣ ತೆತ್ತಿದ್ದಾರೆ. ಇನ್ನು 3.10 ಕೋಟಿಗೂ ಹೆಚ್ಚು ಜನ ಗುಣಮುಖರಾಗಿದ್ದಾರೆ ಹಾಗೂ 95,35,675 ಸಕ್ರಿಯ ಪ್ರಕರಣಗಳಿವೆ.

ಅಮೆರಿಕದಲ್ಲಿ 86 ಲಕ್ಷಕ್ಕೂ ಅಧಿಕ ಪ್ರಕರಣಗಳು

ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಒಟ್ಟು 86 ಲಕ್ಷ ಪ್ರಕರಣಗಳನ್ನು ದಾಟಿದೆ. ಅಲ್ಲಿ ಸದ್ಯ 86,07,785 ಸೋಂಕಿತರಿದ್ದಾರೆ. ಈ ಪೈಕಿ 56,13,849 ಮಂದಿ ಗುಣಮುಖರಾಗಿದ್ದಾರೆ. 2,27,696 ಮಂದಿ ಮೃತಪಟ್ಟಿದ್ದಾರೆ ಎಂದು ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌ ವರ್ಲ್ಡೋಮೀಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನುಳಿದಂತೆ ಭಾರತ ಎರಡನೇ ಸ್ಥಾನದಲ್ಲಿದೆ. ಒಟ್ಟು 77,56,206 ಪ್ರಕರಣಗಳಿರುವ ಭಾರತದಲ್ಲಿ ಈ ವರೆಗೆ 1,17,277 ಮಂದಿ ಮೃತಪಟ್ಟಿದ್ದಾರೆ. 69,41,238 ಮಂದಿ ಗುಣಮುಖರಾಗಿದ್ದಾರೆ.

ಬ್ರೆಜಿಲ್‌ನಲ್ಲಿ 53,03,520 ಪ್ರಕರಣಗಳಿದ್ದು, 1,55,500 ಮಂದಿ ಮೃತಪಟ್ಟಿದ್ದಾರೆ. ರಷ್ಯಾದಲ್ಲಿ 14,63,306 ಪ್ರಕರಣಗಳಿವೆ. 25,242 ಮಂದಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು