ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲಿಟರಿ ವಲಯದಲ್ಲಿ ಅಮೆರಿಕ–ಭಾರತ ಸಂಬಂಧ ಬಲಿಷ್ಠ: ಆಶ್‌ ಕಾರ್ಟರ್‌ ಅಭಿಮತ

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಆಶ್‌ ಕಾರ್ಟರ್‌ ಅಭಿಮತ
Last Updated 12 ಏಪ್ರಿಲ್ 2021, 6:49 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಮಿಲಿಟರಿ ಮತ್ತು ಭದ್ರತೆ ವಲಯದಲ್ಲಿ ಅಮೆರಿಕ ಮತ್ತು ಭಾರತ ನಡುವಣ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳಲಿದೆ’ ಎಂದು ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಆಶ್‌ ಕಾರ್ಟರ್‌ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವ ಅಮೆರಿಕ ಮತ್ತು ಭಾರತ ನಡುವೆ ಹಲವು ವಿಷಯಗಳಲ್ಲಿ ಸಾಮ್ಯತೆ ಇದೆ. ಜತೆಗೆ, ಉತ್ತಮ ಮೌಲ್ಯಗಳನ್ನು ಪರಸ್ಪರ ಹಂಚಿಕೊಂಡಿವೆ’ ಎಂದು ಅವರು ಹೇಳಿದ್ದಾರೆ.

‘ಆದರೆ, ಭಾರತದ ಹಿಂದಿನ ನೀತಿಗಳ ಬಗ್ಗೆ ಅಮೆರಿಕ ಎಚ್ಚರವಹಿಸಬೇಕು. ಅಲಿಪ್ತ ನೀತಿಯನ್ನು ಅನುಸರಿಸಿದ್ದ ಭಾರತ, ರಷ್ಯಾ ಜತೆ ಐತಿಹಾಸಿಕ ಮಿಲಿಟರಿ ಸಂಬಂಧ ಹೊಂದಿರುವುದನ್ನು ಮರೆಯಬಾರದು’ ಎಂದು ಹೇಳಿದ್ದಾರೆ.

‘ಭಾರತದ ಹಲವು ಸೇನಾ ಉಪಕರಣಗಳು ರಷ್ಯಾದಲ್ಲಿ ತಯಾರಿಸಲಾಗಿದೆ. ಹೀಗಾಗಿ, ಭಾರತ ರಷ್ಯಾ ಜತೆ ಸಂಬಂಧವನ್ನು ಮುಂದುವರಿಸಲಿದೆ. ಇದು ಇತಿಹಾಸದ ಭಾಗವಾಗಿದೆ’ ಎಂದು ಹೇಳಿದ್ದಾರೆ.

ಒಬಾಮ ಆಡಳಿತದ ಅವಧಿಯಲ್ಲಿ 2015ರಿಂದ 2017ರವರೆಗೆ ಆಶ್‌ ಕಾರ್ಟರ್‌ ಅವರು ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT