ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕ್‌ಟಾಕ್ ತೆಗೆದುಹಾಕಲು ಸಂಸದರು, ಅಧಿಕಾರಿಗಳಿಗೆ ಸೂಚಿಸಿದ ಡೆನ್ಮಾರ್ಕ್

Last Updated 28 ಫೆಬ್ರವರಿ 2023, 13:03 IST
ಅಕ್ಷರ ಗಾತ್ರ

ಕೋಪನ್‌ಹೆಗನ್‌: ಮೊಬೈಲ್‌ಗಳಿಂದ ಟಿಕ್‌ಟಾಕ್‌ ಅಪ್ಲಿಕೇಷನ್‌ ಅನ್ನು ತೆಗೆದುಹಾಕುವಂತೆ ಡೆನ್ಮಾರ್ಕ್‌ನ ಸಂಸದರು ಮತ್ತು ಎಲ್ಲಾ ಸಿಬ್ಬಂದಿಗೆ ಅಲ್ಲಿನ ಸಂಸತ್ತು ಮಂಗಳವಾರ ಸೂಚನೆ ನೀಡಿದೆ. ಬೇಹುಗಾರಿಕೆಯ ಅಪಾಯದ ಹಿನ್ನೆಲೆಯಲ್ಲಿ ಸಂಸತ್ತು ಈ ತೀರ್ಮಾನಕ್ಕೆ ಬಂದಿದೆ.

ವೃತ್ತಿಗೆ ಸಂಬಂಧಿಸಿದ ಸಾಧನಗಳಲ್ಲಿ ಟಿಕ್‌ಟಾಕ್‌ ಇನ್‌ಸ್ಟಾಲ್‌ ಮಾಡುವುದಕ್ಕೆ ಐರೋಪ್ಯ ಸರ್ಕಾರಗಳು ನಿಷೇಧ ವಿಧಿಸಿವೆ. ಇದರ ಆಧಾರದಲ್ಲಿ ಡ್ಯಾನಿಶ್ ಸೈಬರ್‌ ಭದ್ರತಾ ಏಜೆನ್ಸಿಯೂ ಟಿಕ್‌ಟಾಕ್‌ ಅನ್ನು ತೆಗೆದು ಹಾಕಲು ಸಂಸತ್ತಿಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಡೆನ್ಮಾರ್ಕ್‌ ಸಂಸತ್ತು ಸೂಚನೆ ನೀಡಿದೆ.

‘ಸಂಸದರು ಮತ್ತು ಅಧಿಕಾರಿಗಳಿಗೆ ಸಂಸತ್ತು ನೀಡಿರುವ ಮೊಬೈಲ್‌ಗಳಿಂದ ಟಿಕ್‌ಟಾಕ್‌ ಅಪ್ಲಿಕೇಷನ್‌ ಅನ್ನು ತೆಗೆದುಹಾಕಬೇಕು’ ಎಂದು ಡೆನ್ಮಾರ್ಕ್‌ ಸಂಸತ್ತು ತಿಳಿಸಿದೆ.

‘ಟಿಕ್‌ಟಾಕ್ ಬಳಸುವಾಗ ಬೇಹುಗಾರಿಕೆ ನಡೆಯುವ ಅಪಾಯವಿದೆ. ಆದ್ದರಿಂದ ನಾವು ಎಚ್ಚರವಾಗಿರಬೇಕು’ ಎಂದು ಸ್ಪೀಕರ್ ಸೊರೆನ್ ಗೇಡ್ ಹೇಳಿದರು.

‘ಬೈಟ್‌ಡ್ಯಾನ್ಸ್’ ಒಡೆತನದ ವೀಡಿಯೊ ಆ್ಯಪ್‌ ‘ಟಿಕ್‌ಟಾಕ್‌’ ಮೂಲಕ ಚೀನಾಕ್ಕೆ ಜಗತ್ತಿನ ನಾಗರಿಕರ ಮಾಹಿತಿ ಪೂರೈಕೆಯಾಗುತ್ತಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಟಿಕ್‌ಟಾಕ್‌ ತೀವ್ರ ಶೋಧನೆಗೆ ಒಳಗಾಗಿದೆ.

ಸರ್ಕಾರಿ ಸಾಧನಗಳಲ್ಲಿ ಟಿಕ್‌ಟಾಕ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಅಮೆರಿಕ ಇತ್ತೀಚೆಗೆ ನಿಷೇಧ ವಿಧಿಸಿತ್ತು. ಅಧ್ಯಕ್ಷ ಜೋ ಬೈಡನ್‌ ಡಿಸೆಂಬರ್‌ನಲ್ಲಿ ಈ ಆದೇಶಕ್ಕೆ ಸಹಿ ಹಾಕಿದ್ದರು.

ಕೆನಡಾದ ಸರ್ಕಾರವು ಟಿಕ್‌ಟಾಕ್ ಅನ್ನು ಇತ್ತೀಚೆಗೆ ನಿಷೇಧಿಸಿದೆ.

ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದ ನಂತರ ಭಾರತವೂ ಚೀನಾ ಮೂಲದ ವಿಡಿಯೊ ಆ್ಯಪ್‌ ಟಿಕ್‌ಟಾಕ್‌ ಅನ್ನು ದೇಶದಲ್ಲಿ ನಿಷೇಧಿಸಿದೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT