ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19 ವೈರಸ್‌‘: ದ್ವೇಷ ಬಿತ್ತಲು ಬಳಸುತ್ತಿರುವ ಉಗ್ರರು -ಯುಎನ್‌ಐಸಿಆರ್‌ಐ

ವಿಶ್ವಸಂಸ್ಥೆಯ ‘ಯುಎನ್‌ಐಸಿಆರ್‌ಐ‘ ವರದಿಯಲ್ಲಿ ಉಲ್ಲೇಖ
Last Updated 19 ನವೆಂಬರ್ 2020, 9:23 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಕೊರೊನಾ ವೈರಸ್‌, ಮುಸ್ಲಿಮರಿಗೆ ತೊಂದರೆ ಕೊಡುವವರನ್ನು ಶಿಕ್ಷಿಸಲು ಅಲ್ಲಾ ಕಳುಹಿಸಿರುವ ಸೈನಿಕ‘ ಎಂಬಂತಹ ಸಂಚು ರೂಪಿಸುವ ಸಿದ್ಧಾಂತಗಳು ಹಾಗೂ ಸುಳ್ಳು ಸುದ್ದಿಗಳ ಮೂಲಕ ಸಮಾಜದಲ್ಲಿ ದ್ವೇಷ ಭಾವನೆ ಬಿತ್ತಲು ಅಲ್‌ಖೈದಾ ಮತ್ತು ಐಎಸ್‌ ಉಗ್ರ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖವಾಗಿದೆ.

ಈ ಉಗ್ರ ಸಂಘಟನೆಗಳು ಮತ್ತು ಅವುಗಳನ್ನು ಬೆಂಬಲಿಸುವ ಗುಂಪುಗಳು ಕೋವಿಡ್‌ 19 ಸಾಂಕ್ರಾಮಿಕ ರೋಗವನ್ನು ’ಜೈವಿಕ ಅಸ್ತ್ರ‘ವನ್ನಾಗಿಯೂ ಬಳಸಲು ಪ್ರಯತ್ನಿಸುತ್ತಿವೆ‘ ಎಂಬ ಆತಂಕದ ಸಂಗತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವಸಂಸ್ಥೆಯ ಅಂತರವಲಯ ಅಪರಾಧ ಮತ್ತು ನ್ಯಾಯ ಸಂಶೋಧನಾ ಸಂಸ್ಥೆ (ಯುಎನ್‌ಐಸಿಆರ್‌ಐ) ಬುಧವಾರ ಬಿಡುಗಡೆ ಮಾಡಿದ, ‘ಸ್ಟಾಪ್ ದಿ ವೈರಸ್‌ ಆಫ್ ಡಿಸ್‌ಇನ್ಫರ್ಮೇಷನ್‌: ದಿ ಮೆಲಿಷಿಯಸ್ ಯೂಸ್ ಆಫ್ ಸೋಷಿಯಲ್ ಮೀಡಿಯಾ ಬೈ ಟರರಿಸ್ಟ್‌, ವೈಲೆಂಟ್‌ ಎಕ್ಸ್ಟ್ರಿಮಿಸ್ಟ್‌ ಅಂಡ್ ಕ್ರಿಮಿನಲ್ ಗ್ರೂಪ್ ಡೂರಿಂಗ್ ದಿ ಕೋವಿಡ್ ಪ್ಯಾಂಡಮಿಕ್‘ ಶೀರ್ಷಿಕೆಯ ವರದಿಯಲ್ಲಿ ಈ ಮಾಹಿತಿಗಳಿವೆ.

‘ಸಾರ್ವಜನಿಕರಲ್ಲಿರುವ ಸರ್ಕಾರದ ಮೇಲಿನ ನಂಬಿಕೆಯನ್ನು ಹಾಳು ಮಾಡುವುದು. ತಮ್ಮ ಸಂಘಟನೆಯನ್ನು ಬೆಂಬಲಿಸುವ ಜಾಲಗಳನ್ನು ಬಲಪಡಿಸಿಕೊಳ್ಳುವುದಕ್ಕಾಗಿ ಈ ಉಗ್ರ ಸಂಘಟನೆಗಳು ಈ ಸಾಂಕ್ರಾಮಿಕ ರೋಗವನ್ನು ಅಸ್ತವನ್ನಾಗಿ ಬಳಸಿಕೊಳ್ಳುತ್ತಿವೆ‘ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಈ ಉಗ್ರಗಾಮಿ ಗುಂಪುಗಳು, ಸಮಾಜದಲ್ಲಿ ದ್ವೇಷ ಬಿತ್ತುವಂತಹ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಿವೆ‘ ಎಂದು ವರದಿಯಲ್ಲಿ ತಿಳಿಸಿದೆ.

ಯುಎನ್‌ಐಸಿಆರ್‌ಐ ನಿರ್ದೇಶಕಿ ಆಂಟೋನಿಯಾ ಮೇರಿ ಡಿ ಮಿಯೋ ಅವರು ವರದಿಯಲ್ಲಿ ‘ಕೆಲವು ಭಯೋತ್ಪಾದಕ ಸಂಘಟನೆಗಳು ಉದ್ದೇಶಪೂರ್ವಕವಾಗಿ ಕೋವಿಡ್‌ 19 ಸೋಂಕು ಹರಡಲು ಮತ್ತು ಅದನ್ನು ಸುಧಾರಿತ ಜೈವಿಕ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ‘ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT