ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಭಾರಿ ಹಿಮ; 17 ಜನ ಸಾವು

Last Updated 26 ಡಿಸೆಂಬರ್ 2022, 11:18 IST
ಅಕ್ಷರ ಗಾತ್ರ

ಟೋಕಿಯೊ (ಎಪಿ): ಜಪಾನ್‌ನಲ್ಲಿ ಭಾರಿ ಹಿಮದಿಂದಾಗಿ 17 ಮಂದಿ ಸಾವನ್ನಪ್ಪಿದ್ದು, 90 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನೂರಾರು ಮನೆಗಳು ವಿದ್ಯುತ್‌ ಸಂಪರ್ಕ ಕಳೆದುಕೊಂಡಿವೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಉತ್ತರ ಭಾಗದಲ್ಲಿ ಕಳೆದ ವಾರ ಹಿಮಪಾತದಿಂದ 11 ಮಂದಿ ಸಾವನ್ನಪ್ಪಿದ್ದು, ನೂರಾರು ವಾಹನಗಳು ರಸ್ತೆಯಲ್ಲಿ ನಿಂತುಕೊಂಡಿದ್ದವು. ಮನೆಗಳ ಮೇಲೆ ಬಿದ್ದಿರುವ ಹಿಮವನ್ನು ಸ್ವಚ್ಛಗೊಳಿಸುವಾಗ ಜಾರಿ ಬಿದ್ದು ಹಿಮದಡಿಯಲ್ಲಿ ಸಿಲುಕಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಗಳು ಮಾಹಿತಿ ನೀಡಿದ್ದಾರೆ.

80 ಸೆಂ.ಮೀಗಿಂತ ಹೆಚ್ಚು ದಟ್ಟವಾಗಿ ಹಿಮಪಾತವಾಗಿದ್ದ ನಾಗೈ ನಗರದಲ್ಲಿ ಮೇಲ್ಛಾವಣಿಯಲ್ಲಿದ್ದ ಹಿಮ ಬಿದ್ದು 70 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಭತ್ತದ ಬೆಳೆ ಮತ್ತು ಹೊಸವರ್ಷದ ಕೇಕ್‌ ತಯಾರಿಕೆಗೆ ಹೆಸರುವಾಸಿಯಾದ ನಿಗಾಟಿ ನಗರದ ಜನರು ಗ್ರಾಹಕರನ್ನು ತಲುಪಲಾಗದೆ ಪರದಾಡುವ ಸ್ಥಿತಿ ಎದುರಾಗಿದೆ ಎಂದು ವರದಿ ತಿಳಿಸಿದೆ.

ಹಿಮದಿಂದಾಗಿ ಅನೇಕ ರೈಲು ಮತ್ತು ವಿಮಾನಗಳ ಸಂಚಾರ ಭಾನುವಾರ ಸ್ಥಗಿತಗೊಂಡಿದ್ದು, ಶೀಘ್ರದಲ್ಲಿ ಪುನರಾರಂಭಗೊಳ್ಳಲಿವೆ ಎಂದು ಇಲ್ಲಿಯ ಸಾರಿಗೆ ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT