ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್: ಅರಮನೆ ಆವರಣಕ್ಕೆ ನುಗ್ಗಿದ ಸಿಖ್‌ ಯುವಕನ ಉದ್ದೇಶ ಕೇಳಿ ಹೌಹಾರಿದ ಪೋಷಕರು!

Last Updated 28 ಡಿಸೆಂಬರ್ 2021, 13:32 IST
ಅಕ್ಷರ ಗಾತ್ರ

ಲಂಡನ್‌: ರಾಣಿ ಎರಡನೇಎಲಿಜಬೆತ್‌ಅವರು ಕ್ರಿಸ್‌ಮಸ್‌ ಆಚರಿಸುತ್ತಿದ್ದ ವಿಂಡ್ಸರ್‌ ಕ್ಯಾಸಲ್‌ಗೆ ನುಗ್ಗಿದ್ದ ಭಾರತ ಮೂಲದ 19 ವರ್ಷದ ಯುವಕನ ಉದ್ದೇಶ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸುವುದಾಗಿತ್ತು ಎಂಬ ವಿಷಯ ತಿಳಿದ ಆತನ ಪೋಷಕರು ಹೌಹಾರಿದ್ದಾರೆ.

‘1919ರಲ್ಲಿ ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸುವ ಸಲುವಾಗಿ ರಾಣಿ ಎಲಿಜಬೆತ್‌ ಅವರನ್ನು ಕೊಲ್ಲುವುದು ನನ್ನ ಉದ್ದೇಶವಾಗಿತ್ತು’ ಎಂದು ಬಂಧಿತ ಯುವಕ ಜಸ್ವಂತ್‌ ಸಿಂಗ್ ಚೈಲ್‌ ನ್ಯ್ಯಾಪ್‌ಚಾಟ್‌ ವಿಡಿಯೊದಲ್ಲಿ ಹೇಳಿದ ಅಂಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸ್ಕಾಟ್‌ಲ್ಯಾಂಡ್ ಯಾರ್ಡ್‌ ಪೊಲೀಸರು ಇದನ್ನು ಪರಿಶೀಲಿಸುತ್ತಿದ್ದು, ಯುವಕನ ಪೋಷಕರು ಇದೀಗ ಆತನ ಜೀವದ ಬಗ್ಗೆ ಆತಂಕದಿಂದಿದ್ದಾರೆ. ಬ್ರಿಟನ್‌ನ ಮಾನಸಿಕ ಆರೋಗ್ಯ ಕಾಯ್ದೆಯ ಅಡಿಯಲ್ಲಿ ಯುವಕನನ್ನು ಬಂಧಿಸಲಾಗಿದೆ.

ಯುವಕನ ಪೋಷಕರು ಹ್ಯಾಂಪ್‌ಶೈರ್‌ನಲ್ಲಿ ವಾಸವಾಗಿದ್ದು, ಅವರು ಐಟಿ ಸಂಸ್ಥೆಯೊಂದರ ನಿರ್ದೇಶಕರು. ಯುವಕನಿಗೆ ಇಬ್ಬರು ಅವಳಿ ಸಹೋದರಿಯರೂ ಇದ್ದಾರೆ. ‘ನನ್ನ ಪುತ್ರನಿಗೆ ಏನೋ ತೊಂದರೆ ಆಗಿದೆ. ಆದು ಏನೆಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಆತನೊಂದಿಗೆ ಮಾತನಾಡುವ ಅವಕಾಶ ನಮಗೆ ಸಿಕ್ಕಿಲ್ಲ. ಆತ ಬಯಸಿದ ನೆರವು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಯುವಕನ ತಂದೆ ಜಸ್ಮೀರ್ ಸಿಂಗ್‌ (58) ಹೇಳಿದ್ದಾರೆ ಎಂದು ‘ದಿ ಟೈಮ್ಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT