ಭಾನುವಾರ, ಜನವರಿ 24, 2021
27 °C

ಇಂಡೊನೇಷ್ಯಾ: ಲಂಚ ಸ್ವೀಕಾರ ಆರೋಪದಡಿ ಸಾಮಾಜಿಕ ವ್ಯವಹಾರಗಳ ಸಚಿವರ ಬಂಧನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತಾ: ಕೋವಿಡ್‌ ಸಂತ್ರಸ್ತರ ಆಹಾರ ಯೋಜನೆಗೆ ಸಂಬಂಧಿಸಿದಂತೆ ₹8.85 ಕೋಟಿ (1.2 ಮಿಲಿಯನ್‌ ಡಾಲರ್‌) ಲಂಚ ಸ್ವೀಕರಿಸಿದ ಆರೋಪದಡಿ ಇಂಡೊನೇಷ್ಯಾದ ಸಾಮಾಜಿಕ ವ್ಯವಹಾರಗಳ ಸಚಿವರನ್ನು ಭಾನುವಾರ ಬಂಧಿಸಲಾಗಿದೆ.

ಇಂಡೊನೇಷ್ಯಾದ ಭ್ರಷ್ಟಾಚಾರ ನಿಗ್ರಹ ದಳವು ಶನಿವಾರ ಸಚಿವ ಜೂಲಿಯಾರಿ ಬಟುಬರಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ₹8.85 ಕೋಟಿ ಮೊತ್ತವನ್ನು ಒಳಗೊಂಡ ಸೂಟ್‌ಕೇಸ್‌, ಬ್ಯಾಗ್‌ ಅನ್ನು ವಶಕ್ಕೆ ಪಡೆದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡೊನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ  ಅವರು, ‘ಇದು ಜನರ ಹಣ. ಕೋವಿಡ್‌–19 ಸಮಯದಲ್ಲಿ ಆರ್ಥಿಕತೆ ವೃದ್ಧಿಸಲು ಇದರ ಅಗತ್ಯವಿದೆ. ನಾನು ಯಾವುದೇ ಭ್ರಷ್ಟರಿಗೆ ರಕ್ಷಣೆ ನೀಡುವುದಿಲ್ಲ’ ಎಂದರು.

ಕೋವಿಡ್‌ನಿಂದಾಗಿ ಇಂಡೊನೇಷ್ಯಾದ ಆರ್ಥಿಕತೆಯು ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಸಮಸ್ಯೆಗೊಳಗಾಗಿರುವ ಜನರಿಗಾಗಿ ಸರ್ಕಾರವು ಆಹಾರ ಪ್ಯಾಕೆಜ್‌ಗಳಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

‘ಜೂಲಿಯಾರಿ ಬಟುಬರಾ ಅವರು ಸರ್ಕಾರದ ಆಹಾರ ಯೋಜನೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಿದ್ದಾರೆ. ಸಂತ್ರಸ್ಥರಿಗೆ ಆಹಾರ ವಿತರಣೆಯ ಗುತ್ತಿಗೆ ಪಡೆದಿದ್ದ ವ್ಯಕ್ತಿಗಳಿಬ್ಬರಿಂದ ಜೂಲಿಯಾರಿ  ₹8.85 ಕೋಟಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು