ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ವರದಿ

ಬಾಗ್ದಾದ್ (ಇರಾಕ್): ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಗುರುವಾರ ಡ್ರೋನ್ ದಾಳಿಯಾಗಿದೆ ಎಂದು ಇರಾಕಿ ಭದ್ರತಾ ಏಜೆನ್ಸಿಗಳು ವರದಿ ಮಾಡಿವೆ.
ಭದ್ರತಾ ಸಂಸ್ಥೆಗಳ ಹೇಳಿಕೆಯ ಪ್ರಕಾರ, ಮೂರು ಡ್ರೋನ್ ದಾಳಿಗಳಲ್ಲಿ ಒಂದನ್ನು ಹೊಡೆದುರುಳಿಸಲಾಗಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ವಿಕ್ಟರಿ ಮಿಲಿಟರಿ ನೆಲೆ ಮೇಲೆ ರಾಕೆಟ್ ದಾಳಿಯಾಗಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ: ಅಫ್ಗಾನಿಸ್ತಾನ ಗುಂಡಿನ ದಾಳಿ; ಎಚ್ಎಎಲ್ಒ ಟ್ರಸ್ಟ್ನ 10 ಸಿಬ್ಬಂದಿ ಸಾವು
ಇದಕ್ಕೂ ಸ್ವಲ್ಪ ಸಮಯ ಮೊದಲು, ಇರಾಕಿ ಪ್ರಾಂತ್ಯದ ಸಲಾಹ್ ಅದ್ ದಿನ್ ಎಂಬಲ್ಲಿರುವ ಬಾಲಾಡ್ ವಾಯುನೆಲೆ ರಾಕೆಟ್ ದಾಳಿಗೊಳಗಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದೆ.
ಈ ವರೆಗೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇರಾಕ್‌ನ ಅಮೆರಿಕ ಸೇನಾ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಇರಾನ್ ಬೆಂಬಲಿತ ಗುಂಪು ದಾಳಿ ನಡೆಸಿದೆ ಎಂದು ಅಮೆರಿಕ ದೂರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.