ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ ತೊರೆದ ಕಟ್ಟಕಡೆಯ ಅಮೆರಿಕ ಸೇನಾಧಿಕಾರಿ ಇವರು!

Last Updated 31 ಆಗಸ್ಟ್ 2021, 4:59 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಫ್ಗಾನಿಸ್ತಾನದಿಂದ ಅಮೆರಿಕದ ಜನರ ತೆರವು ಕಾರ್ಯಾಚರಣೆ ಸೋಮವಾರ ಮಧ್ಯರಾತ್ರಿಯ ಹೊತ್ತಿಗೆ ಮುಕ್ತಾಯಗೊಂಡಿರುವುದಾಗಿ ಅಮೆರಿಕ ಸರ್ಕಾರ ಘೋಷಿಸಿದೆ. ಅಮೆರಿಕದ ಸೇನಾ ಪಡೆಗಳೂ ಸಂಪೂರ್ಣವಾಗಿ ಅಫ್ಗಾನಿಸ್ತಾನ ತೊರೆದಿವೆ.

ಈ ಮಧ್ಯೆ, ಅಫ್ಗಾನಿಸ್ತಾನದಿಂದ ಕಟ್ಟಕಡೆಯದಾಗಿ ಅಮೆರಿಕ ವಿಮಾನವೇರಿದ ಸೇನಾಧಿಕಾರಿಯ ಚಿತ್ರವನ್ನು ಅಮೆರಿಕದ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.

‘ಕಾಬೂಲ್‌ನಲ್ಲಿ ಕಾರ್ಯಾಚರಣೆ ಮುಗಿದ ಬಳಿಕ ಕೊನೆಯದಾಗಿ ಅಮೆರಿಕ ವಾಯುಪಡೆಯ ‘ಸಿ–17’ ವಿಮಾನವೇರಿದ ‘ಆಲ್ ಅಮೆರಿಕನ್ ಡಿವಿಷನ್’ನ ಮೇಜರ್ ಜನರಲ್ ಕ್ರಿಸ್ ಡೊನಾಹ್ಯೂ’ ಎಂದು ಚಿತ್ರ ಸಹಿತ ಟ್ವೀಟ್ ಮಾಡಲಾಗಿದೆ.

‘ಅಫ್ಗಾನಿಸ್ತಾನದಲ್ಲಿ ನಮ್ಮದು ನಂಬಲಾಗದಷ್ಟು ಕಠಿಣವಾದ, ಒತ್ತಡದಿಂಡ ಕೂಡಿದ್ದ ಕಾರ್ಯಾಚರಣೆಯಾಗಿತ್ತು. ಬಹು ಸಂಕೀರ್ಣತೆಯಿಂದ ಕೂಡಿದ್ದ ಕಾರ್ಯಾಚರಣೆಗೆ ಪ್ರತಿ ಹಂತದಲ್ಲಿಯೂ ಬೆದರಿಕೆ ಇತ್ತು. ನಮ್ಮ ಸೇನಾಪಡೆಯು ಶಿಸ್ತು ಮತ್ತು ಸಹಾನುಭೂತಿಯಿಂದ ವರ್ತಿಸಿತು. ಅಫ್ಗಾನಿಸ್ತಾನದಿಂದ ಕೊನೆಯದಾಗಿ ನಿರ್ಗಮಿಸಿದ ನಮ್ಮ ಸೇನಾಧಿಕಾರಿಯ ಚಿತ್ರ ಇಲ್ಲಿ ನೀಡಲಾಗಿದೆ’ ಎಂದು ಅಮೆರಿಕ ವಾಯುಪಡೆಯ ವಿಭಾಗ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT