ಶನಿವಾರ, ಮೇ 28, 2022
31 °C

ರಷ್ಯಾ: ಆರು ಜನರಿದ್ದ ಮಿಲಿಟರಿ ವಿಮಾನ ಕಣ್ಮರೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೊ: ಖಬರೊಸ್ಕವ್‌ ನಗರದ ಪೂರ್ವ ಪ್ರದೇಶದಿಂದ ಆರು ಜನರಿದ್ದ ರಷ್ಯಾದ ಎಎನ್‌–26 ಮಿಲಿಟರಿ  ವಿಮಾನವು ಬುಧವಾರ ಕಣ್ಮರೆಯಾಗಿದೆ.

‘ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 6.45ರ ವೇಳೆಗೆ ಖಬರೊಸ್ಕವ್‌ ವಿಮಾನನಿಲ್ದಾಣದ 38 ಕಿ.ಮೀ. ವ್ಯಾಪ್ತಿಯ ರಾಡಾರ್‌ನಿಂದ ಎಎನ್‌–26 ಮಿಲಿಟರಿ ವಿಮಾನವು ಸಂಪರ್ಕ ಕಳೆದುಕೊಂಡು, ಕಣ್ಮರೆಯಾಗಿದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

‘ವಿಮಾನವನ್ನು ಪತ್ತೆ ಹಚ್ಚಲು ಹೆಲಿಕಾಪ್ಟರ್ ಕಳುಹಿಸಲಾಗಿದೆ. ಆದರೆ, ಕತ್ತಲು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಹುಡುಕಾಟ ಕಾರ್ಯವು ಜಟಿಲವಾಗಿದೆ’ ಎಂದೂ ಸಚಿವಾಲಯವು ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು