ಮಂಗಳವಾರ, ಮಾರ್ಚ್ 2, 2021
19 °C
ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ವೈಫಲ್ಯ: ದಕ್ಷಿಣ ಕೊರಿಯಾ ಅಧ್ಯಕ್ಷರ ಅಭಿಮತ

ಟ್ರಂಪ್ ಆಡಳಿತದ ವೈಫಲ್ಯಗಳಿಂದ ಬೈಡನ್ ಪಾಠ ಕಲಿಯಲಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಸಿಯೋಲ್‌: ಅಮೆರಿಕ ಮತ್ತು ಉತ್ತರ ಕೊರಿಯಾದ ರಾಜತಾಂತ್ರಿಕ ಸಂಬಂಧದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಅನುಭವಿಸಿದ ವೈಫಲ್ಯಗಳಿಂದ ಪಾಠ ಕಲಿತು, ಮುಂದಿನ ಹೆಜ್ಜೆ ಇಡುವಂತೆ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರಿಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೆ ಇನ್‌ ತಿಳಿಸಿದ್ದಾರೆ.

ಉತ್ತರ ಕೊರಿಯಾದ ನಾಯಕ ಅಧ್ಯಕ್ಷ ಕಿಮ್ ಜೊಂಗ್ ಉನ್ ಮತ್ತು ಟ್ರಂಪ್ ಅವರ ನಡುವೆ ಮೂರು ಶೃಂಗಸಭೆಗಳನ್ನು ಆಯೋಜಿಸಲು ಮೂನ್ ಜೆ ಇನ್ ತೀವ್ರ ಲಾಬಿ ಮಾಡಿದ್ದರು. ಆದರೆ ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ನಡೆದ ‘ಪರಮಾಣು ನಿಶಸ್ತ್ರೀಕರಣ‘ ಕುರಿತ ಮಾತುಕತೆ ಯಶಸ್ವಿಯಾಗದ ಕಾರಣ, ಈ ರಾಷ್ಟ್ರಗಳ ನಡುವೆ ರಾಜತಾಂತ್ರಿಕತೆ ಸ್ಥಗಿತಗೊಂಡಿತು.

ಇಂಥ ವಿಚಾರಗಳಲ್ಲಿ ಟ್ರಂಪ್‌ಗಿಂತ ಬೈಡನ್ ಭಿನ್ನ ವಿಧಾನವನ್ನು ಅನುಸರಿಸುವ ಸಾಧ್ಯತೆ ಇದೆ  ಎಂದು ಮೂನ್ ಒಪ್ಪಿಕೊಂಡರೂ, ಉತ್ತರ ಕೊರಿಯಾ ನಿಭಾಯಿಸುವಲ್ಲಿ ಟ್ರಂಪ್‌ ಆಡಳಿತದ ರಾಜತಾಂತ್ರಿಕ ವೈಫಲ್ಯಗಳಿಂದ  ಜೋ ಬೈಡನ್ ಆಡಳಿತ ಪಾಠ ಕಲಿಯಬೇಕು ಎಂಬುದನ್ನು ಒತ್ತಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು