ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ, ಒಂದು ವರ್ಷದ ವರೆಗೆ ತುರ್ತು ಪರಿಸ್ಥಿತಿ ಘೋಷಣೆ

Last Updated 1 ಫೆಬ್ರುವರಿ 2021, 2:59 IST
ಅಕ್ಷರ ಗಾತ್ರ

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ದಂಗೆಯೆದ್ದಿರುವ ಸೇನೆಯು ಯಾಂಗೂನ್ ನಗರದ ಸರ್ಕಾರಿ ಕಟ್ಟಡದ ಮೇಲೆ ನಿಯಂತ್ರಣ ಸಾಧಿಸಿದ್ದು, ಒಂದು ವರ್ಷದ ವರೆಗೆ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ಕುರಿತು ಸರ್ಕಾರಿ ದೂರದರ್ಶನದಲ್ಲಿ ಘೋಷಣೆ ಮಾಡಲಾಗಿದೆ.

ಅಧಿಕಾರವನ್ನು ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಮೀನ್ ಆಂಗ್ ಲಾಯ್ ಅವರಿಗೆ ವಹಿಸಲಾಗಿದೆ ಎಂದೂ ಹೇಳಲಾಗಿದೆ.

ಯಾಂಗೂನ್ ನಗರದ ಸರ್ಕಾರಿ ಕಟ್ಟಡದ ಮೇಲೆ ಸಶಸ್ತ್ರ ಪಡೆಗಳು ಸೋಮವಾರ ನಿಯಂತ್ರಣ ಸಾಧಿಸಿದ್ದವು. ದೇಶದ ಪರಮೋಚ್ಚ ನಾಯಕಿ ಆಂಗ್‌ ಸಾನ್ ಸೂಕಿ ಅವರನ್ನು ಸೇನೆಯು ಬಂಧಿಸಿದ ನಂತರ ಅಲ್ಲಿ ದಂಗೆಯ ಲಕ್ಷಣಗಳು ಗೋಚರಿಸಿದ್ದವು.

ಸರ್ಕಾರಿ ಕಟ್ಟಡದ ಆವರಣದ ಒಳಗೆ ಐದು ಸೇನಾ ಟ್ರಕ್‌ಗಳು ಬೀಡುಬಿಟ್ಟಿದ್ದು, ಕರ್ತವ್ಯಕ್ಕೆ ಹಜರಾಗುತ್ತಿರುವ ಸರ್ಕಾರಿ ನೌಕರರನ್ನು ಯೋಧರು ತಡೆಯುತ್ತಿದ್ದಾರೆ ಎಂದು ‘ಎಎಫ್‌ಪಿ’ಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT