ಬುಧವಾರ, ಮಾರ್ಚ್ 22, 2023
33 °C

ಪಾಕ್‌ನಲ್ಲಿ ನಿಗೂಢ ಕಾಯಿಲೆ: 18 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ಪಾಕಿಸ್ತಾನದ ಬಂದರು ಪ್ರದೇಶ ಕರಾಚಿಯ ಕೆಮರಿಯಲ್ಲಿ ನಿಗೂಢ ಕಾಯಿಲೆಯಿಂದ 14 ಮಕ್ಕಳು ಸೇರಿ 18 ಜನರು ಮೃತಪಟ್ಟಿದ್ದಾರೆ. 

ಜನವರಿ 10 ರಿಂದ 15ರ ನಡುವೆ ಈ ಸಾವುಗಳು ಸಂಭವಿಸಿವೆ. ಮೃತರೆಲ್ಲರೂ ಕೆಮರಿಯ ಮೇವಕ್‌ ಗೋತ್‌ ಪ್ರದೇಶದವರು. ಕಾಯಿಲೆ ಏನೆಂಬುದನ್ನು ನಿಖರವಾಗಿ ಪತ್ತೆಹಚ್ಚಲು ಆಗಿಲ್ಲ ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಅಬ್ದುಲ್‌ ಹಮೀದ್ ಜುಮಾನಿ ಶುಕ್ರವಾರ ತಿಳಿಸಿದ್ದಾರೆ.

‘ಕರಾವಳಿ ಪ್ರದೇಶಕ್ಕೆ ಗೋತ್ ಗ್ರಾಮವು ಹತ್ತಿರವಿದ್ದು, ಇದೊಂದು ಕೊಳೆಗೇರಿ. ಸಮುದ್ರ ಅಥವಾ ನೀರಿನಿಂದ ಈ ಕಾಯಿಲೆ ಹರಡಿರುವ ಶಂಕೆ ಇದೆ’ ಎಂದು ಅವರು ಹೇಳಿದ್ದಾರೆ.

‘ನಿಗೂಢ ಕಾಯಿಲೆಗೆ ತುತ್ತಾದವರು ಸಾಯುವ ಮೊದಲು ವಿಪರೀತ ಜ್ವರ, ಗಂಟಲು ಊತ ಮತ್ತು ಉಸಿರಾಟದ ತೊಂದರೆ ಅನುಭವಿಸಿದ್ದರೆಂದು ಮೃತರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದರು’ ಎಂದು ಜುಮಾನಿ ಹೇಳಿದ್ದಾರೆ. 

‘ಗೋತ್‌ನಲ್ಲಿ ಎರಡು ವಾರಗಳಿಂದ ದುರ್ವಾಸನೆ ಬರುತ್ತಿದ್ದ ಬಗ್ಗೆ ನಿವಾಸಿಗಳಿಂದ ದೂರು ಬಂದಿತ್ತು. ಕೆಲವು ಕಾರ್ಖಾನೆ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಪ್ರದೇಶದ ಕಾರ್ಖಾನೆಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಪರಿಸರ ಮತ್ತು ಆರೋಗ್ಯ ಇಲಾಖೆಗಳಿಗೆ ಸೂಚಿಸಲಾಗಿದೆ’ ಎಂದು  ಕೆಮರಿ ಉಪ ಆಯುಕ್ತ ಮುಖ್ತಾರ್‌ ಅಲಿ ಅಬ್ರೋ ತಿಳಿಸಿದ್ದಾರೆ.       

‘ಸೋಯಾಬೀನ್ ಅಲರ್ಜಿಯಿಂದ ಸಾವು ಸಂಭವಿಸಿರುವ ಶಂಕೆ ಇದೆ. ಕಾರ್ಖಾನೆಗಳಿಂದ ಸೋಯಾಬೀನ್‌ ಮಾದರಿ ಸಂಗ್ರಹಿಸಲಾಗಿದೆ’ ಎಂದು ಸಿಂಧ್‌ ರಾಸಾಯನಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥ ಇಕ್ಬಾಲ್‌ ಚೌಧರಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು