ವಾಷಿಂಗ್ಟನ್: ಅಮೆರಿಕದ ಸೇನಾ ಪ್ರಧಾನ ಕಚೇರಿಯಾಗಿರುವ ಪೆಂಟಗನ್ ಕಟ್ಟಡದ ಹೊರಗಡೆ ಸಂಭವಿಸಿದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಇರಿದು ಕೊಲ್ಲಲಾಗಿದ್ದು, ಶಂಕಿತ ಕೊಲೆ ಆರೋಪಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ.

ಪೆಂಟಗನ್ ಹೊರಭಾಗದ ಬಸ್ ಪ್ಲಾಟ್ಫಾರಂನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಪೆಂಟಗನ್ ಅನ್ನು ಲಾಕ್ಡೌನ್ಗೆ ಒಳಪಡಿಸಲಾಗಿದೆ. ಘಟನೆ ನಡೆದ ಗಂಟೆಗಳ ಬಳಿಕವೂ ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

ಕಳೆದ ಜನವರಿ 6ರಂದು ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿಯ ಬಳಿಕ ಸರ್ಕಾರಿ ಕಟ್ಟಟಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದ್ದು, ಪೆಂಟಗನ್ ಬಳಿ ಸಂಭವಿಸಿದ ಈ ದಾಳಿಯನ್ನೂ ಬೈಡನ್ ಆಡಳಿತ ಬಹಳ ಗಂಭೀರವಾಗಿ ಪರಿಗಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.