1.35 ಕೋಟಿ ಮಕ್ಕಳಿಗೆ ಪೋಲಿಯೊ ಲಸಿಕೆ; ಅಭಿಯಾನ ಆರಂಭಿಸಿದ ಪಾಕಿಸ್ತಾನ

ಇಸ್ಲಾಮಾಬಾದ್: ದೇಶದ 36 ಜಿಲ್ಲೆಗಳಲ್ಲಿನ 1.35 ಕೋಟಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಸಲುವಾಗಿ ಪಾಕಿಸ್ತಾನ ಆರೋಗ್ಯ ಇಲಾಖೆಯು ಈ ವರ್ಷದಲ್ಲಿ ಮೂರನೇ ಬಾರಿಗೆ ಲಸಿಕೆ ಅಭಿಯಾನವನ್ನು ಇಂದಿನಿಂದ (ಸೋಮವಾರದಿಂದ) ಆರಂಭಿಸಲಿದೆ.
ಪೂರ್ವ ಪಂಜಾಬ್ ಪ್ರಾಂತ್ಯದ ಒಂಬತ್ತು ಜಿಲ್ಲೆಗಳು, ದಕ್ಷಿಣ ಸಿಂಧ್‌ನ ಎಂಟು ಜಿಲ್ಲೆಗಳು ಮತ್ತು ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಆರು ಜಿಲ್ಲೆಗಳು ಲಸಿಕೆ ಅಭಿಯಾನದದ ವ್ಯಾಪ್ತಿಗೆ ಬರಲಿವೆ ಎಂದು ಸಚಿವಾಲಯ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.
ಪಾಕಿಸ್ತಾನದಲ್ಲಿ ಈ ವರ್ಷ (2022ರಲ್ಲಿ) ಒಟ್ಟು 20 ಪೋಲಿಯೊ ಪ್ರಕರಣಗಳು ಪತ್ತೆಯಾಗಿವೆ. ವರದಿಯಾಗಿರುವ ಎಲ್ಲ ಪ್ರಕರಣಗಳೂ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿವೆ. ದೇಶದ ಇತರ ಭಾಗಗಳಲ್ಲಿಯೂ ಪೋಲಿಯೊ ವೈರಸ್ ಪತ್ತೆಯಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೇ ವರದಿ ಮಾಡಿದೆ.
ಇದನ್ನೂ ಓದಿ: ಪಾಕಿಸ್ತಾನದ ಮೂರು ನಗರಗಳಲ್ಲಿ ಪೋಲಿಯೊ ವೈರಸ್ ಪತ್ತೆ
ಸಚಿವಾಲಯದ ಮಾಹಿತಿ ಪ್ರಕಾರ ತರಬೇತಿ ಪಡೆದ ಹಾಗೂ ಆರೋಗ್ಯ ಕಾರ್ಯಕರ್ತರು ಸೇರಿ 1 ಲಕ್ಷಕ್ಕೂ ಹೆಚ್ಚು ಮಂದಿ ಲಸಿಕೆ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.