ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಪಾಕ್‌ನಲ್ಲಿ ಅಫ್ಗನ್‌ ನಿರಾಶ್ರಿತರಿಗೆ ಹೊಸ ಶಿಬಿರ ಸ್ಥಾಪಿಸುವುದಿಲ್ಲ: ಶೇಖ್ ರಶೀದ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ‘ಅಫ್ಗಾನಿಸ್ತಾನದ ನಿರಾಶ್ರಿತರಿಗಾಗಿ ಹೊಸ ಶಿಬಿರವನ್ನು ಸ್ಥಾಪಿಸುವುದಿಲ್ಲ’ ಎಂದು ಪಾಕಿಸ್ತಾನದ ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಹೇಳಿದ್ದಾರೆ.

‘ಈಗಾಗಲೇ ಪಾಕಿಸ್ತಾನದಲ್ಲಿ 30 ಲಕ್ಷ ಅಫ್ಗನ್ ನಿರಾಶ್ರಿತರು ಇದ್ದಾರೆ. ಅಲ್ಲದೆ ಪಾಕಿಸ್ತಾನಕ್ಕೆ ಪ್ರವೇಶಿಸಲು ಗಡಿ ಬಳಿ ಜನರು ಗುಂಪುಗೂಡಿದ್ದಾರೆ’ ಎಂದು ವರದಿಯೊಂದು ಹೇಳಿತ್ತು.

ಇದರ ಬೆನ್ನಲ್ಲೇ ಅಫ್ಗಾನೊಂದಿಗಿನ ಟಾರ್ಕಮ್‌ ಗಡಿ ಪ್ರದೇಶಕ್ಕೆ ರಶೀದ್‌ ಅವರು ಭಾನುವಾರ ಭೇಟಿ ನೀಡಿದರು. ಆ  ಬಳಿಕ ಮಾತನಾಡಿದ ಅವರು,‘ ಟಾರ್ಕಮ್‌ ಗಡಿ ಪ್ರದೇಶದಲ್ಲಿ ಯಾವುದೇ ಅಫ್ಗನ್‌ ನಿರಾಶ್ರಿತರಿಲ್ಲ. ನಾವು ಇಲ್ಲಿ ಹೊಸ ಶಿಬಿರವನ್ನು ಸ್ಥಾಪಿಸಿಲ್ಲ’ ಎಂದು ಹೇಳಿದ್ದಾರೆ. ಈ ಬಗ್ಗೆ ಬಿಸಿನೆಸ್ ರೆಕಾರ್ಡರ್ ಪತ್ರಿಕೆ ವರದಿ ಮಾಡಿದೆ.

‘ಪಾಕಿಸ್ತಾನದಲ್ಲಿ ಅರ್ಧದಷ್ಟು ಅಫ್ಗನ್‌ ನಿರಾಶ್ರಿತರು ಕಾನೂನು ಬಾಹಿರವಾಗಿ ವಾಸವಾಗಿದ್ದಾರೆ. ಅವರು ಈವರೆಗೆ ದೇಶದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಅಧಿಕೃತವಾಗಿ ನೊಂದಾಯಿಸಿಕೊಂಡಿರುವ 15 ಲಕ್ಷ ಜನರು ಮಾತ್ರ ಇಲ್ಲಿ ಉಳಿಯಲು, ಓಡಾಡಲು ಮತ್ತು ವ್ಯವಹಾರ ನಡೆಸುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದಾರೆ’ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದರು.

‘ಅಫ್ಗಾನಿಸ್ತಾನದಲ್ಲಿ ಬಿಕ್ಕಟ್ಟು ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ ಇನ್ನು ಮುಂದೆ ನಾವು ಅಫ್ಗನ್‌ ನಿರಾಶ್ರಿತರಿಗೆ ನಾವು ಅವಕಾಶ ನೀಡುವುದಿಲ್ಲ’ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಸಚಿವರುಗಳು ಅಫ್ಗನ್‌ ನಿರಾಶ್ರಿತರಿಗೆ ಉಳಿಯಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಪಾಕಿಸ್ತಾನವನ್ನು ಪ್ರವೇಶಿಸಲು ಅಫ್ಗಾನಿಸ್ತಾನದ 4,000 ಜನರಿಗೆ ವೀಸಾ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕೃತವಾಗಿ ಪಾಕಿಸ್ತಾನ ಮಂಜೂರು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು