ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೋನೇಷ್ಯಾದಲ್ಲಿ 6.8ರ ತೀವ್ರತೆ ಪ್ರಬಲ ಭೂಕಂಪ

Last Updated 24 ಫೆಬ್ರುವರಿ 2023, 4:45 IST
ಅಕ್ಷರ ಗಾತ್ರ

ಜಕಾರ್ತ: ಶುಕ್ರವಾರ ಬೆಳಗ್ಗೆ ಪೂರ್ವ ಇಂಡೋನೇಷ್ಯಾದ ಉತ್ತರ ಮಲುಕು ಎಂಬಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ, ಆದರೆ ಯಾವುದೇ ಸಾವು–ನೋವು ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪವು ಶುಕ್ರವಾರ ನಸುಕಿನ 03:02ರ ವೇಳೆಯಲ್ಲಿ ಸಂಭವಿಸಿದೆ. ಅದರ ಕೇಂದ್ರಬಿಂದುವನ್ನು ಮೊರೊಟೈ ಜಿಲ್ಲೆಯ ವಾಯುವ್ಯಕ್ಕೆ 133 ಕಿ.ಮೀ ದೂರದಲ್ಲಿ, ಸಮುದ್ರತಳದ 112 ಕಿ.ಮೀ ಆಳದಲ್ಲಿ ಗುರುತು ಮಾಡಲಾಗಿದೆ. ಆದರೆ, ಸುನಾಮಿ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದು ದೇಶದ ಹವಾಮಾನ ಇಲಾಖೆ ಹೇಳಿದೆ.

ಭೂಕಂಪದ ಪರಿಣಾಮವಾಗಿ ಉತ್ತರ ಸುಲವೆಸಿ ಪ್ರಾಂತ್ಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಕಂಪದಿಂದ ಕಟ್ಟಡಗಳಿಗೆ ಹಾನಿಯಾದ ನಿದರ್ಶನಗಳಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದ್ದಾರೆ ಎಂದು ಸುದ್ದಿ ವಾಹಿನಿ ‘ಕ್ಸಿನ್ಹುವಾ’ ವರದಿ ಮಾಡಿದೆ.

‘ಪೆಸಿಫಿಕ್ ರಿಂಗ್ ಆಫ್ ಫೈರ್’ ಎಂಬ ದುರ್ಬಲ, ಭೂಕಂಪ-ಪೀಡಿತ ವಲಯದಲ್ಲಿ ಇಂಡೋನೇಷ್ಯಾ ಇದೆ. ಹೀಗಾಗಿ ಇಲ್ಲಿ ಆಗಾಗ ಭೂಕಂಪ ಸಂಭವಿಸುವುದೂ ಅಲ್ಲದೇ, ಸುನಾಮಿ ಭೀತಿ ಎದುರಾಗುತ್ತಿರುತ್ತದೆ.

ಗುರುವಾರ ತಜಕಿಸ್ತಾನದಲ್ಲೂ 6.8ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ವಿರಳ ಜನಸಂಖ್ಯೆಯ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದರಿಂದ ಅಲ್ಲಿಯೂ ಸಾವು–ನೋವು ಉಂಟಾಗಿರಲಿಲ್ಲ. ಆದರೆ, ಎರಡು ವಾರಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಉಂಟಾದ ಭೂಕಂಪದಲ್ಲಿ ಈ ವರೆಗೆ 47 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT