ಮಂಗಳವಾರ, ಮಾರ್ಚ್ 28, 2023
31 °C

ರಷ್ಯಾ ಪ್ರತೀಕಾರ ದಾಳಿ: 600ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರು ಸಾವು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಮಾಸ್ಕೊ: ಕ್ರಾಮರಸ್ಕ್‌ನಲ್ಲಿನ ತಾತ್ಕಾಲಿಕ ಸೇನಾ ನೆಲೆಯ ಮೇಲೆ ಸಶಸ್ತ್ರ ಪಡೆಗಳು ಭಾರಿ ಕ್ಷಿಪಣಿ ದಾಳಿ ನಡೆಸಿ 600ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರನ್ನು ಕೊಂದಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಜನರಲ್ ಐಗೊರ್ ಕೊನಶೆಂಕೋವ್ ಭಾನುವಾರ ತಿಳಿಸಿದ್ದಾರೆ.

ಡೊನೆಟ್‌ಸ್ಕ್‌ ಗಣರಾಜ್ಯದ ಮಕೀವ್ಕಾದಲ್ಲಿ ರಷ್ಯಾ ಸೈನಿಕರು ಬೀಡು ಬಿಟ್ಟಿದ್ದ ತಾತ್ಕಾಲಿಕ ಸೇನಾ ನೆಲೆಯ ಮೇಲೆ ಉಕ್ರೇನ್‌ ಸೇನೆ ಹೊಸ ವರ್ಷದ ವೇಳೆ ಹಿಮಾರ್ಸ್‌ ಕ್ಷಿಪಣಿ ದಾಳಿ ನಡೆಸಿ 89 ಮಂದಿ ರಷ್ಯಾ ಸೈನಿಕರನ್ನು ಕೊಂದಿತ್ತು.

ಶನಿವಾರ ನಡೆದ ಕ್ಷಿಪಣಿ ದಾಳಿಯು ಪ್ರತೀಕಾರದ ಕಾರ್ಯಾಚರಣೆಯ ಭಾಗವಾಗಿತ್ತು. ಕ್ರಾಮರಸ್ಕ್‌ನ ಸೇನಾ ನೆಲೆಯ ವಸತಿ ನಿಲಯದ ಸಂಖ್ಯೆ 28ರಲ್ಲಿ 700ಕ್ಕೂ ಹೆಚ್ಚು ಮತ್ತು ವಸತಿ ನಿಲಯದ ಸಂಖ್ಯೆ 47ರಲ್ಲಿ 600ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರು ತಂಗಿದ್ದರು ಎಂದು ಐಗೋರ್‌ ಹೇಳಿರುವುದಾಗಿ ರಷ್ಯಾದ ಸುದ್ಧಿ ಸಂಸ್ಥೆ ‘ಟಾಸ್‌’ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು