ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಅಂತ್ಯವಾಡುವ ನಿಟ್ಟಿನಲ್ಲಿ ಉಭಯ ದೇಶಗಳ ಮಧ್ಯೆ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ, ರಷ್ಯಾದ ಸೇನಾಪಡೆ ಉಕ್ರೇನ್ ರಾಜಧಾನಿ ಕೀವ್ ಪ್ರಾಂತ್ಯ ಹಾಗೂ ಇತರ ನಗರಗಳಲ್ಲಿ ಬಾಂಬ್ ದಾಳಿಯನ್ನು ಮುಂದುವರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ನ ಪ್ರದೇಶಗಳಿಗೆ ಪೂರ್ಣ ಪ್ರಮಾಣದಲ್ಲಿ ನುಗ್ಗಲು ವಿಫಲವಾಗಿರುವ ರಷ್ಯಾದ ಪಡೆಗಳು ಬೃಹತ್ ನಗರಗಳ ಮೇಲೆ ಶೆಲ್ ದಾಳಿಯನ್ನು ನಿರಂತರವಾಗಿ ನಡೆಸುತ್ತಿವೆ ಎಂದು ದೂರಿದ್ದಾರೆ.

ಬುಧವಾರ ಕೀವ್ ನಗರದಲ್ಲಿರುವ 12 ಮಹಡಿಯ ಕಟ್ಟಡದ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ. ಇದರಿಂದಾಗಿ ಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೀವ್ ಸುತ್ತಮುತ್ತಲಿನ 12 ಪಟ್ಟಣಗಳಿಗೆ ವಿದ್ಯುತ್ ಮತ್ತು ನೀರು ಪೂರೈಕೆ ಸ್ಥಗಿತವಾಗಿದೆ. ಮ್ಯೂಸಿಯಂಗಳು, ಚರ್ಚ್ಗಳು ಮತ್ತಿತರ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ರಾಜಧಾನಿಯನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿರುವ ರಷ್ಯಾ ಸೇನೆ ಪ್ರಮುಖ ಸಾರಿಗೆ ಸಂಪರ್ಕಗಳನ್ನು ನಾಶಪಡಿಸಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.