ಭಾನುವಾರ, ಜೂನ್ 26, 2022
21 °C

ಕೋವಿಡ್‌: ಸಿಂಗಪುರ ರೆಡ್‌ಕ್ರಾಸ್‌ನಿಂದ ಭಾರತಕ್ಕೆ ₹38 ಕೋಟಿ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡುವ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಸಹಾಯ ಮಾಡಲೆಂದು ಸಿಂಗಪುರ ರೆಡ್‌ಕ್ರಾಸ್‌ (ಎಸ್‌ಆರ್‌ಸಿ) ಸುಮಾರು ₹38 ಕೋಟಿ ನೆರವು ನೀಡುತ್ತಿರುವುದಾಗಿ ಎಸ್‌ಆರ್‌ಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಿಇಒ ಬೆಂಜಮಿನ್‌ ವಿಲಿಯನ್ಸ್‌ ತಿಳಿಸಿದ್ದಾರೆ.

ಸಿಂಗಪುರ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಸಿಐಸಿಸಿಐ) ಮತ್ತು ಲಿಟಲ್ ಇಂಡಿಯನ್ ಶಾಪ್‌ಕೀಪರ್ಸ್ ಅಂಡ್ ಹೆರಿಟೇಜ್ ಅಸೋಸಿಯೇಷನ್ (ಲಿಶಾ) ಸಂಗ್ರಹಿಸಿದ ದೇಣಿಗೆಯ ₹ 5.50 ಕೋಟಿಯ ಚೆಕ್‌ ಅನ್ನೂ ಸ್ವೀಕರಿಸಿ ವಿಲಿಯಮ್ಸ್ ಮಾತನಾಡಿದರು.

‘ದಾನ ಮಾಡುವ ಹೃದಯ ಸಿಂಗಪುರದವರಿಗಿದೆ’ ಎಂದು ‘ಲಿಶಾ’ ಅಧ್ಯಕ್ಷ ಸಿ.ಶಂಕರನಾಥನ್ ತಿಳಿಸಿದರು.

ಎಸ್‌ಆರ್‌ಸಿ ಸಂಗ್ರಹಿಸಿರುವ ಮೊತ್ತವನ್ನು ಭಾರತದಲ್ಲಿರುವ ರೆಡ್‌ಕ್ರಾಸ್‌ ಮುಖ್ಯಸ್ಥರಿಗೆ ಕಳುಹಿಸುವುದಾಗಿ ವಿಲಿಯಮ್ಸ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು