ಮಾಸ್ಕೊ: ರಷ್ಯಾದ ಶಾಲೆಯೊಂದರಲ್ಲಿ ಬಂದೂಕುಧಾರಿಯೊಬ್ಬ ಸೋಮವಾರ ಬೆಳಿಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ 7 ಮಕ್ಕಳು ಸೇರಿ 13 ಮಂದಿ ಮೃತಪಟ್ಟು, 21ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉದ್ಮುರ್ಶಿಯಾ ಪ್ರಾಂತ್ಯದರಾಜಧಾನಿ ಇಜ್ಹೆಸ್ಕ್ನ ಶಾಲೆಗೆ ನುಗ್ಗಿದ ಅಪರಿಚಿತ ಬಂದೂಕುಧಾರಿ ಶಾಲೆಯ ಗಾರ್ಡ್ ಮತ್ತು ಮಕ್ಕಳನ್ನು ಕೊಂದಿದ್ದಾನೆ.ಶಾಲೆಯಲ್ಲಿ 1ರಿಂದ 11ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಗವರ್ನರ್ ಅಲೆಗ್ಸಾಂಡರ್ ಬ್ರೆಚಲೊವ್ ತಿಳಿಸಿದ್ದಾರೆ.

ಗವರ್ನರ್ ಮತ್ತು ಸ್ಥಳೀಯ ಪೊಲೀಸರ ಪ್ರಕಾರ, ಗುಂಡಿನ ದಾಳಿ ಬಳಿಕ ಬಂದೂಕುಧಾರಿ ತನಗೆ ತಾನೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಕೂಡಲೇ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, ಪ್ರದೇಶವನ್ನು ಸುತ್ತುವರಿಯಲಾಗಿದೆ.

ಗಾಯಗೊಂಡವರಲ್ಲಿ 14 ಮಕ್ಕಳು ಮತ್ತು 7 ಮಂದಿ ಇತರರು ಸೇರಿದ್ದಾರೆ ಎಂದು ತನಿಖಾ ಸಮಿತಿ ಹೇಳಿದೆ.

ಗನ್ಮ್ಯಾನ್ ಮತ್ತು ಅವನ ಉದ್ದೇಶ ಏನಾಗಿತ್ತು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆತ ಕಪ್ಪು ಟೀಶರ್ಟ್ ಧರಿಸಿದ್ದ, ಅದರ ಮೇಲೆ ನಾಜಿ ಚಿಹ್ನೆ ಇತ್ತು ಎಂದು ತನಿಖಾ ಸಮಿತಿ ಹೇಳಿದೆ.

6,40,000 ಜನರಿರುವ ಇಜ್ಹೆಸ್ಕ್ ನಗರವು ರಷ್ಯಾ ಕೇಂದ್ರ ಭಾಗದ ಉರಾಲ್ ಪರ್ವತ ಪ್ರದೇಶದ ಪಶ್ಚಿಮಕ್ಕೆ ಈ ನಗರವಿದೆ. ರಷ್ಯಾ ರಾಜಧಾನಿ ಮಾಸ್ಕೊದಿಂದ 960 ಕಿ.ಮೀ ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.