ಚಂಬ್ಲೀ (ಅಮೆರಿಕ): ಅಟ್ಲಾಂಟಾದ ಈಶಾನ್ಯ ಭಾಗದ ಉಪನಗರದಲ್ಲಿರುವ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ (ಟೇಕ್ ಆಫ್) ಲಘು ವಿಮಾನವೊಂದು, ಅದೇ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಸಿಂಗಲ್ ಎಂಜಿನ್ ಸೆಸ್ಸಾನಾ 210 ವಿಮಾನವು ಶುಕ್ರವಾರ ಮಧ್ಯಾಹ್ನ 1.10ರ ಸುಮಾರಿಗೆ ಡೆಕಾಲ್ಬ್-ಪೀಚ್ ಟ್ರೀ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ, ಬೆಂಕಿ ಹೊತ್ತಿಕೊಂಡಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
‘ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ‘ ಎಂದು ಕೌಂಟಿ ಅಗ್ನಿಶಾಮಕ ದಳದ ವಕ್ತಾರರು ತಿಳಿಸಿದ್ದಾರೆ.
ಕೌಂಟಿ ಒಡೆತನದ ವಿಮಾನ ನಿಲ್ದಾಣದ ರನ್‌ವೇನಲ್ಲಿ ಈ ವಿಮಾನ ಅಪಘಾತಕ್ಕೀಡಾಯಿತು. ವಿಮಾನ ಕೆಳಗೆ ಬಿದ್ದಕೂಡಲೇ ಬೆಂಕಿ ಹೊತ್ತುಕೊಂಡಿತು. ತಕ್ಷಣ 15 ಮಂದಿ ಅಗ್ನಿಶಾಮಕ ಸಿಬ್ಬಂದಿ ರನ್ ವೇ ಕಡೆಗೆ ಓಡಿದರು. ತ್ವರಿತಗತಿಯಲ್ಲಿ ಬೆಂಕಿ ನಂದಿಸಿದರು ಎಂದು ಕೌಂಟಿ ಅಗ್ನಿಶಾಮಕ ಅಧಿಕಾರಿ, ಕ್ಯಾಪ್ಟನ್ ಜೇಸನ್ ಡೇನಿಯಲ್ಸ್ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನು ಅಧಿಕಾರಿಗಳು ತಕ್ಷಣಕ್ಕೆ ಬಹಿರಂಗಪಡಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.