ಶನಿವಾರ, ಮೇ 21, 2022
27 °C

ಕೆರೊಲಿನದಲ್ಲಿ ಗರ್ಭಪಾತ ನಿಷೇಧ–ಮಸೂದೆಗೆ ಅಂಗೀಕಾರ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೊಲಂಬಿಯಾ: ಕೆಲವು ನಿರ್ದಿಷ್ಟ ಕಾರಣ ಹೊರತುಪಡಿಸಿ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸುವ ಮಸೂದೆಯೊಂದನ್ನು ದಕ್ಷಿಣ ಕೆರೊಲಿನಾ ರಾಜ್ಯದ ಶಾಸನಸಭೆ ಅಂಗೀಕರಿಸಿದೆ.

ಗರ್ಭಿಣಿಯರ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವಂತಹ ಹಾಗೂ ಗರ್ಭಪಾತಕ್ಕೆ ಅವಕಾಶ ನೀಡುವ ‘ರೋಯಿ ವಿ. ವೇಡ್‘ ನಿಯಮ ಸದ್ತ ಅಮೆರಿಕದಲ್ಲಿ ಅಸ್ತಿತ್ವದಲ್ಲಿದ್ದು, ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ ಮಾತ್ರ ಇದನ್ನು ಬದಲಿಸಲು ಸಾಧ್ಯವಿದೆ. ದಕ್ಷಿಣ ಕೆರೊಲಿನಾದಂತೆ ಅಮೆರಿಕದ 12ಕ್ಕೂ ಅಧಿಕ ರಾಜ್ಯಗಳಲ್ಲಿ ಈಗಾಗಲೇ ಗರ್ಭಪಾತವನ್ನು ಸಂಪೂರ್ಣ ನಿಷೇಧಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಆದರೆ ಇದನ್ನು ವಿರೋಧಿಸುವವರ ಸಂಖ್ಯೆಯೂ ದೊಡ್ಡದಾಗಿದ್ದು, ಎಲ್ಲಾ ರಾಜ್ಯಗಳಲ್ಲೂ ದಾವೆ ಹೂಡಿದ್ದಾರೆ. ಹೀಗಾಗಿ ಕೋರ್ಟ್‌ ತಡೆಯಾಜ್ಞೆಯ ಕಾರಣ ಯಾವೊಂದು ರಾಜ್ಯದಲ್ಲೂ ಇದು ಅನುಷ್ಠಾನಕ್ಕೆ ಬಂದಿಲ್ಲ.‌

ದಕ್ಷಿಣ ಕರೊಲಿನಾ ಮಸೂದೆ: ‘ಗರ್ಭಪಾತಕ್ಕೆ ಮೊದಲು ವೈದ್ಯರು ಅಲ್ಟ್ರಾಸೌಂಡ್‌ ಪರೀಕ್ಷೆ ಮೂಲಕ ಭ್ರೂಣಕ್ಕೆ ಹೃದಯಬಡಿತ ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಇದೆ ಎಂದಾದರೆ ಗರ್ಭಪಾತ ಮಾಡುವಂತಿಲ್ಲ.  ಅತ್ಯಾಚಾರ, ಬಲಾತ್ಕಾರದಿಂದ ಸಂಭೋಗ ಅಥವಾ ತಾಯಿಯ ಜೀವಕ್ಕೆ ಅಪಾಯ ಇದೆ ಎಂಬ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಯಾವ ಸಂದರ್ಭದಲ್ಲೂ ಗರ್ಭಪಾತ ಮಾಡುವಂತಿಲ್ಲ. ಮಾಡಿದ್ದೇ ಆದರೆ ಮಾಡಿಸಿಕೊಂಡ ಮಹಿಳೆಗೆ ಶಿಕ್ಷೆ ಇಲ್ಲ, ಬದಲಿಗೆ ಗರ್ಭಪಾತ ಮಾಡಿ ಆರೋಪ ಸಾಬೀತುಗೊಂಡ ವೈದ್ಯರಿಗೆ 2 ವರ್ಷ ಜೈಲು, 10 ಸಾವಿರ ಡಾಲರ್ ದಂಡ ವಿಧಿಸಬಹುದಾಗಿದೆ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು