ಮಂಗಳವಾರ, ಅಕ್ಟೋಬರ್ 20, 2020
23 °C

ದಕ್ಷಿಣ ಕೊರಿಯಾ: ಕೊರೊನಾ ಪ್ರಕರಣಗಳು ಇಳಿಮುಖ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೋಲ್‌: ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಸತತ ಐದು ದಿನಗಳಿಂದ 100ಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗಿವೆ.

ಆದರೆ, ಈ ಐದು ದಿನಗಳು ರಜಾ ದಿನಗಳಾಗಿದ್ದರಿಂದ ಹೆಚ್ಚಿನ ಜನರು ಪ್ರವಾಸ ಕೈಗೊಂಡಿದ್ದರು. ಹಾಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಹೇಳಿದರು. 

ದಕ್ಷಿಣ ಕೊರಿಯಾದಲ್ಲಿ ಈವರೆಗೆ 24,164 ಮಂದಿ ಸೋಂಕಿಗೆ ಒಳಗಾಗಿದ್ದು, 422 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ(ಕೆಡಿಸಿಎ) ತಿಳಿಸಿದೆ.

ಭಾನುವಾರ 73 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 51 ಪ್ರಕರಣಗಳು ರಾಜಧಾನಿ ಸೋಲ್‌ನಲ್ಲಿ ಕಂಡುಬಂದಿದೆ. ಇಲ್ಲಿನ ಉತ್ತರದ ಪೊಚಿಯೋನ್‌ನಲ್ಲಿರುವ ಸೇನಾ ಘಟಕದ 30 ಸೈನಿಕರಲ್ಲಿ ಸೋಂಕು ದೃಢಪಟ್ಟಿದೆ.  ಅಮೆರಿಕ, ಬ್ರಿಟನ್‌, ರಷ್ಯಾ ಮತ್ತು ಉಜ್ಬೆಕಿಸ್ತಾನದಿಂದ ದಕ್ಷಿಣ ಕೊರಿಯಾಗೆ ಆಗಮಿಸಿದ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಕೆಡಿಸಿಎ ಮಾಹಿತಿ ನೀಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು