ಉಕ್ರೇನ್ ಎಂದು ತನ್ನ ಹೆಸರನ್ನೇ ಬದಲಿಸಿಕೊಂಡ ಸ್ಪೇನ್ ದೇಶದ ಆ ಹಳ್ಳಿ: ಕಾರಣ ಏನು?

Fuentes de Andalucia (ಸ್ಪೇನ್): ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಯುರೋಪ್‌ನ ಉಕ್ರೇನ್ ದೇಶಕ್ಕೆ ಧೈರ್ಯ ತುಂಬಲು ಸ್ಪೇನ್ ದೇಶದ ಹಳ್ಳಿಯೊಂದು ತನ್ನ ಹೆಸರನ್ನೇ ಬದಲಿಸಿಕೊಂಡಿದೆ.
ಸ್ಪೇನ್‌ನ ದಕ್ಷಿಣ ಭಾಗದ Fuentes de Andalucia ಎಂಬ ಹಳ್ಳಿ ತನ್ನ ಹೆಸರನ್ನು ಉಕ್ರೇನ್ ಎಂದು ಬದಲಿಸಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಪೃಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ಹಳ್ಳಿ ಸದಾ ಶಾಂತಯುತವಾಗಿ ತನ್ನತ್ತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೀಗ ಉಕ್ರೇನ್‌ಗೆ ಧೈರ್ಯ ತುಂಬಲು ತನ್ನ ಹೆಸರನ್ನು ಬದಲಿಸಿಕೊಂಡಿದೆ ಮತ್ತು ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಉಕ್ರೇನ್ ದೇಶದ ಬಾವುಟಗಳನ್ನು ನೆಡಲಾಗಿದೆ.
ಇನ್ನೊಂದು ವಿಶೇಷವೆಂದರೆ ಸುಮಾರು 7000 ಜನ ಇರುವ ಈ ಹಳ್ಳಿಯ ಪ್ರಮುಖ ಬೀದಿಗಳಿಗೆ, ಕೀವ್, ಹಾರ್ಕಿವ್, ಒದೆಶಾ ಮತ್ತು ಮರಿಯಾಫೋಲ್ ಎಂದು ಹೆಸರಿಸಲಾಗಿದೆ. ‘ಉಕ್ರೇನ್ ಪರಿಸ್ಥಿತಿ ನೋಡಿ ನಮಗೆ ಪಾಪ ಎನಿಸುತ್ತದೆ. ನಮ್ಮಿಂದ ಇಷ್ಟು ಮಾಡುವುದು ಸಮಂಜಸ ಎನಿಸುತ್ತದೆ’ ಎನ್ನುತ್ತಾರೆ ಅಲ್ಲಿನ ನಿವಾಸಿಯೊಬ್ಬರು.
ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಎರಡು ದಿನದಲ್ಲಿ ಸುಮಾರು 3,500 ಯುರೋಗಳನ್ನು ಸಂಗ್ರಹಿಸಿ ಉಕ್ರೇನ್‌ನಿಂದ ಬಂದ ನಿರಾಶ್ರಿತರಿಗೆ ಹಂಚಲು ನಿರ್ಧರಿಸಿದ್ದಾರೆ. 25 ಉಕ್ರೇನ್ ಕುಟುಂಬಗಳಿಗೆ ಆಶ್ರಯ ನೀಡುವುದಾಗಿ ಗ್ರಾಮಸ್ಥರು ಹೇಳಿದ್ದಾರೆ ಎಂದು ರಾಯಿಟರ್ಸ್ ಹೇಳಿದೆ.
ಉಕ್ರೇನ್ನ ನೊಂದ ನಾಗರಿಕರಿಗೆ ನೆಲೆ ನೀಡಲು ನಿರ್ಧಾರ ಮಾಡಿದ ಈ ಅರಬ್ ದೇಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.