ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ಜ್ವಾಲೆಯಲ್ಲಿ ಸಿಲುಕಲಿದೆ ಚೀನಾ: ತೈವಾನ್‌ನಿಂದ ಮಿಲಿಟರಿ ವಿಡಿಯೊ ಸಂದೇಶ

Last Updated 23 ಆಗಸ್ಟ್ 2020, 1:57 IST
ಅಕ್ಷರ ಗಾತ್ರ

ಬೀಜಿಂಗ್‌: ತೈವಾನ್‌ನ ಭದ್ರತೆಗೆ ಚೀನಾದಿಂದ ಅಪಾಯ ಎದುರಾಗಬಹುದಾದ ಅಪಾಯಗಳ ಸಾಧ್ಯತೆಗಳ ನಡುವೆಯೇ, ತೈವಾನ್‌ ರಕ್ಷಣಾ ಸಚಿವಾಲಯವು ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸುವ ವಿಡಿಯೊವೊಂದನ್ನು ಶನಿವಾರ ಬಿಡುಗಡೆ ಮಾಡಿದೆ.

ತನ್ನ ದೇಶದ ರಕ್ಷಣೆಗಾಗಿ ದ್ವೀಪ ರಾಷ್ಟ್ರವು ಯುದ್ಧ ವಿಮಾನ ನಾಶಕ, ಟ್ಯಾಂಕರ್‌ ನಾಶಕ, ಯುದ್ಧನೌಕೆ ನಾಶಕ ಕ್ಷಿಪಣಿಗಳನ್ನು ಉಡಾಯಿಸುತ್ತಿರುವ ಸನ್ನಿವೇಶಗಳು ವಿಡಿಯೊದಲ್ಲಿವೆ. ಈ ಕುರಿತು ‘ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ವರದಿ ಮಾಡಿದೆ.

‘ದ್ವೀಪ ರಾಷ್ಟ್ರದ ರಕ್ಷಣಾ ಸಾಮರ್ಥ್ಯವನ್ನು ಯಾರೂ ಕಡೆಗಣಿಸಬಾರದು,’ ಎಂದು ಚೀನಾಕ್ಕೆ ತೈವಾನ್‌ ವಿಡಿಯೊದಲ್ಲಿ ಸಂದೇಶವನ್ನೂ ನೀಡಿದೆ.

‘ಅತ್ಯಂತ ಅಹಂಕಾರಿ ದೇಶವು ಆಲೋಚನೆಯಿಲ್ಲದೆ ಯುದ್ಧವನ್ನು ಪ್ರಚೋದಿಸಿದರೆ, ಆ ಅಜ್ಞಾನಿ ಸರ್ಕಾರವು ಯುದ್ಧದ ಜ್ವಾಲೆಯಲ್ಲಿ ಸಿಲುಕಿಕೊಳ್ಳಲಿದೆ,’ ಎಂದು ತೈವಾನ್‌ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

‘ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿಯ ನಿರಂತರ ಪ್ರಚೋದೆನೆಯು ಇನ್ನು ಮುಂದೆ ಕೆಲಸ ಮಾಡುವುದಿಲ್ಲ,’ ಎಂದು ತೈವಾನ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT