ಶನಿವಾರ, ಸೆಪ್ಟೆಂಬರ್ 18, 2021
30 °C

ತಾಲಿಬಾನ್‌ ಆಡಳಿತದಲ್ಲಿ ಮಹಿಳೆಯರು ಕ್ರಿಕೆಟ್‌ ಆಡುವಂತಿಲ್ಲ: ಆದೇಶ  

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

 ಕಾಬೂಲ್‌:  ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ತನ್ನ ಸರ್ಕಾರವನ್ನು ಘೋಷಿಸಿಕೊಂಡಿದ್ದೂ ಅಲ್ಲದೇ, ವಿವಿಧ ಇಲಾಖೆಗಳಿಗೆ ಮಂತ್ರಿಗಳನ್ನೂ ನೇಮಕ ಮಾಡಿಕೊಂಡಿದೆ. ಈಗ ಒಂದೊಂದೇ ಇಲಾಖೆಗಳಿಂದ ಹೇಳಿಕೆಗಳು ಹೊರಬರಲಾರಂಭಿಸಿದ್ದು, ತಾಲಿಬಾನ್‌ಗಳ ಆಡಳಿತ ಹೇಗಿರಲಿದೆ ಎಂಬುದರ ಮುನ್ಸೂಚನೆ ಸಿಗಲಾರಂಭಿಸಿದೆ. 

ಅಫ್ಗಾನಿಸ್ತಾನದ ಸಾಂಸ್ಕೃತಿಕ ಸಚಿವಾಲಯವು ತೆಗೆದುಕೊಂಡ ನಿರ್ಧಾರಗಳ ಪೈಕಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವುದೂ ಒಂದಾಗಿದೆ. 

’ಮಹಿಳೆಯರು ಕ್ರಿಕೆಟ್ ಆಡುವುದು ಅನಿವಾರ್ಯವೇನಲ್ಲ. ಏಕೆಂದರೆ ಅವರು ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳಲು ಆಗದಂಥ ಪರಿಸ್ಥಿತಿಯನ್ನು ಕ್ರಿಕೆಟ್‌ ಆಟದ ವೇಳೆ ಎದುರಿಸಬೇಕಾಗಬಹುದು. ಇಸ್ಲಾಂ ಮಹಿಳೆಯರನ್ನು ಈ ರೀತಿ ನೋಡಲು ಒಪ್ಪುವುದಿಲ್ಲ’ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಅವರು ಸುದ್ದಿ ವಾಹಿನಿ ‘ಎಸ್‌ಬಿಎಸ್’ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಈ ನಿರ್ಧಾರದಿಂದಾಗಿ ಅಫ್ಗಾನಿಸ್ತಾನದ ಮಹಿಳಾ ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ತಂಡಗಳು ಅನಿಶ್ಚಿತತೆ ಎದುರಿಸಬೇಕಾಗಿ ಬಂದಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು